ದ್ವಿತೀಯ ಪಿಯು ತಮಿಳು ಪರೀಕ್ಷೆ: ಒಬ್ಬ ಪರೀಕ್ಷಾರ್ಥಿಗೆ 14 ಸಿಬ್ಬಂದಿ!

ಮಂಗಳವಾರ, ಮಾರ್ಚ್ 26, 2019
31 °C

ದ್ವಿತೀಯ ಪಿಯು ತಮಿಳು ಪರೀಕ್ಷೆ: ಒಬ್ಬ ಪರೀಕ್ಷಾರ್ಥಿಗೆ 14 ಸಿಬ್ಬಂದಿ!

Published:
Updated:
ದ್ವಿತೀಯ ಪಿಯು ತಮಿಳು ಪರೀಕ್ಷೆ: ಒಬ್ಬ ಪರೀಕ್ಷಾರ್ಥಿಗೆ 14 ಸಿಬ್ಬಂದಿ!

ಚಿಕ್ಕಮಗಳೂರು: ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏಕೈಕ ವಿದ್ಯಾರ್ಥಿನಿ ದ್ವಿತೀಯ ಪಿಯು ಪರೀಕ್ಷೆ ಬರೆದರು. 14 ಸಿಬ್ಬಂದಿ ಪರೀಕ್ಷಾ ಕಾರ್ಯ ನಿರ್ವಹಿಸಿದರು.

ನಗರದ ಎಂಇಎಸ್‌ ಕಾಲೇಜಿನ ಜಿ. ನಿವಿತಾ ಅವರು ತಮಿಳು ಭಾಷಾ ವಿಷಯದ ಪರೀಕ್ಷೆ ಬರೆದರು. ಬೆಳಿಗ್ಗೆ 10.15ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಿತು.

ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕ ಮತ್ತು ಕಾಲೇಜಿನ ಪ್ರಾಚಾರ್ಯ ಎನ್‌. ಚಂದ್ರಶೇಖರಯ್ಯ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ಇದೊಂದೇ ಕೇಂದ್ರದಲ್ಲಿ ತಮಿಳು ವಿಷಯ ಪರೀಕ್ಷೆ ಇತ್ತು. ಪರೀಕ್ಷಾರ್ಥಿ ಒಬ್ಬರೇ ಇದ್ದರು. ಕೊಠಡಿ ಮೇಲ್ವಿಚಾರಕ, ಕಚೇರಿ ಮೇಲ್ವಿಚಾರಕ, ಜಾಗೃತ ದಳ, ವಿಚಕ್ಷಣಾ ದಳ, ಪೊಲೀಸರು ಸೇರಿದಂತೆ ಒಟ್ಟು 14 ಸಿಬ್ಬಂದಿ ಪರೀಕ್ಷಾ ಕಾರ್ಯ ನಿರ್ವಹಿಸಿದರು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry