ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿ ಪ್ಯಾಟ್ ಯಂತ್ರಗಳ ತಪಾಸಣೆ

ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಯಂತ್ರಗಳ ಪ್ರಾತ್ಯಕ್ಷಿಕೆ
Last Updated 16 ಮಾರ್ಚ್ 2018, 10:29 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನ ಅನ್ವಯ ಜಿಲ್ಲೆಯಲ್ಲಿ ದಾಸ್ತಾನು ಆಗಿರುವ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯ ನಡೆಯಿತು.

ಗುರುವಾರ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ಮಾಕ್ ಪೋಲ್ (ಪ್ರಾತ್ಯಕ್ಷಿಕೆ) ಕಾರ್ಯ ನಡೆಸಲಾಯಿತು. ಹೊಸದಾಗಿ ಪರಿಚಯಿಸಲಾಗಿರುವ ವಿವಿ ಪ್ಯಾಟ್ ಯಂತ್ರದ ಬಗ್ಗೆ ವಿವರಣೆಯನ್ನು ಜಿಲ್ಲಾಧಿಕಾರಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ, ಪ್ರೊಬೆಷನರಿ ಕೆ.ಎ.ಎಸ್ ಅಧಿಕಾರಿಗಳು, ಯೋಜನಾ ನಿರ್ದೇಶಕರು ಡಿ.ಯು.ಡಿಸಿ, ಕಾಂಗ್ರೆಸ್ ಪಕ್ಷದ ಪದಾಧಿಕಾರಿ ನಾರಾಯಣಗೌಡ, ಬಿಜೆಪಿ ಪದಾಧಿಕಾರಿ ಪ್ರವೀಣ್ ಹಾಜರಿದ್ದರು.

ಮೊದಲ ಹಂತದ ಪರಿಶೀಲನೆ ಮುಗಿದಿರುವ ಮತಯಂತ್ರಗಳನ್ನು ಬಳಸಿ ಪ್ರಾಯೋಗಿಕ ಅಣಕು ಮತದಾನ ಪ್ರದರ್ಶನ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT