ಅದಮ್ಯ ಚೇತನ ಸಂಸ್ಥೆಗೆ ವಾಹನ ಕೊಡುಗೆ

ಭಾನುವಾರ, ಮಾರ್ಚ್ 24, 2019
34 °C

ಅದಮ್ಯ ಚೇತನ ಸಂಸ್ಥೆಗೆ ವಾಹನ ಕೊಡುಗೆ

Published:
Updated:
ಅದಮ್ಯ ಚೇತನ ಸಂಸ್ಥೆಗೆ ವಾಹನ ಕೊಡುಗೆ

ಬೆಂಗಳೂರು: ಮಕ್ಕಳಿಗಾಗಿ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಅದಮ್ಯ ಚೇತನ ಸ್ವಯಂಸೇವಾ ಸಂಸ್ಥೆಗೆ  ₹ 18 ಲಕ್ಷ ವೆಚ್ಚದ ವಾಹನವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)  ಕೊಡುಗೆ ನೀಡಿದೆ.

ಶುಕ್ರವಾರ ಇಲ್ಲಿ ನಡೆದ ಸಮಾರಂಭದಲ್ಲಿ ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಅವರು ವಾಹನವನ್ನು ಹಸ್ತಾಂತರಿಸಿದರು.

‘ಮಕ್ಕಳಿಗೆ ಗುಣಮಟ್ಟ ಮತ್ತು ಪೌಷ್ಟಿಕ ಊಟ ಒದಗಿಸಲು ಎಸ್‌ಬಿಐ ಈ ನೆರವಿನ ಹಸ್ತ ಚಾಚಿದೆ’ ಎಂದು ರಜನೀಶ್‌ ಕುಮಾರ್‌ ಹೇಳಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ಬೆಂಗಳೂರು ಪ್ರಾದೇಶಿಕ ಪ್ರಧಾನ ಕಚೇರಿಯ ಚೀಫ್ ಜನರಲ್ ಮ್ಯಾನೇಜರ್ ಫಾರೂಕ್ ಷಹಾಬ್‌, ಅದಮ್ಯ ಚೇತನ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಾ.ತೇಜಸ್ವಿನಿ ಅನಂತಕುಮಾರ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry