ಗೊಂದಲಕ್ಕೆ ಉತ್ತರಿಸಿದ ಚೆಲುವೆ ಆಲಿಯಾ

ಸೋಮವಾರ, ಮಾರ್ಚ್ 25, 2019
28 °C

ಗೊಂದಲಕ್ಕೆ ಉತ್ತರಿಸಿದ ಚೆಲುವೆ ಆಲಿಯಾ

Published:
Updated:
ಗೊಂದಲಕ್ಕೆ ಉತ್ತರಿಸಿದ ಚೆಲುವೆ ಆಲಿಯಾ

ನಟಿ ಆಲಿಯಾ ಭಟ್‌ ಈಚೆಗೆ ತಮ್ಮ 25ನೇ ಹುಟ್ಟುಹಬ್ಬವನ್ನು ಬಲ್ಗೇರಿಯಾದಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಸೆಟ್‌ನಲ್ಲಿ  ನಿರ್ದೇಶಕರು, ಸಹನಟರ ಜೊತೆ ಸಂಭ್ರಮದಿಂದ ಆಚರಿಸಿಕೊಂಡರು. ವಿಶೇಷವೆಂದರೆ ಈ ಸಂದರ್ಭದಲ್ಲಿ ರಣಬೀರ್‌ ಕಪೂರ್‌ ಕೂಡ ಅಲ್ಲಿದ್ದರು.

ರಣಬೀರ್‌ ಕಪೂರ್‌ ಹಾಗೂ ಆಲಿಯಾ ಭಟ್‌ ಜೋಡಿಹಕ್ಕಿಗಳು ಎಂಬ ಮಾತು ಈಗ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸಿದ್ಧಾರ್ಥ್‌ ಮಲ್ಹೋತ್ರ ಜೊತೆಗಿನ ಸಂಬಂಧ ಬ್ರೇಕ್‌ ಅಪ್‌ ಆದ ನಂತರ ಆಲಿಯಾ, ರಣಬೀರ್‌ ಜೊತೆಗೆ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ. ಇದಲ್ಲದೇ ಆಲಿಯಾ ಹೆಸರು ಈ ಹಿಂದೆ ಅನೇಕ ನಟರ ಜೊತೆ ಕೇಳಿಬಂದಿತ್ತು.

ತನ್ನ ಬಗೆಗಿನ ಈ ಎಲ್ಲಾ ಸಂದೇಹಗಳಿಗೆ ಆಲಿಯಾ ಹುಟ್ಟುಹಬ್ಬದಂದು ಉತ್ತರ ನೀಡಿದ್ದು, ‘ಇಂತಹ ಸುದ್ದಿಗಳನ್ನು ಓದುವಾಗ ನನಗೇ ಗೊಂದಲವಾಗುತ್ತದೆ. ಆದರೆ ಮೌನವೇ ಬಂಗಾರ ಎಂದು ನಂಬಿರುವವಳು ನಾನು. ನಾನು ನನ್ನ ವೈಯಕ್ತಿಕ ಬದುಕಿನ ಬಗ್ಗೆ ಹೇಳಿಕೊಳ್ಳುವುದಿಲ್ಲ. ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ.

‘ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಆಲಿಯಾ ಹಾಗೂ ರಣಬೀರ್‌ ಕಪೂರ್‌ ಒಟ್ಟಾಗಿ ನಟಿಸುತ್ತಿದ್ದಾರೆ. ₹150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ, 2019ರಲ್ಲಿ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry