ವಿಚ್ಚೇದನಕ್ಕೆ ಟ್ರಂಪ್ ಸೊಸೆ ಅರ್ಜಿ

7

ವಿಚ್ಚೇದನಕ್ಕೆ ಟ್ರಂಪ್ ಸೊಸೆ ಅರ್ಜಿ

Published:
Updated:
ವಿಚ್ಚೇದನಕ್ಕೆ ಟ್ರಂಪ್ ಸೊಸೆ ಅರ್ಜಿ

ನ್ಯೂಯಾರ್ಕ್‌ (ಪಿಟಿಐ): ಡೊನಾಲ್ಡ್‌ ಟ್ರಂಪ್ ಸೊಸೆ ವನೆಸ್ಸಾ ಹೇಡನ್ ಟ್ರಂಪ್  ಅವರು ವಿಚ್ಛೇದನ ಕೋರಿ ಮ್ಯಾನ್‌ಹಟನ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

12 ವರ್ಷಗಳ ಹಿಂದೆ ಟ್ರಂಪ್ ಅವರ ಹಿರಿಯ ಮಗ ಡೊನಾಲ್ಡ್‌ ಟ್ರಂಪ್ ಜೂನಿಯರ್ ಅವರನ್ನು ಮದುವೆಯಾಗಿದ್ದರು. ದಂಪತಿಗೆ ಐವರು ಮಕ್ಕಳಿದ್ದಾರೆ. ಹೇಡನ್‌ ವಿಚ್ಛೇದನದ ಬಗ್ಗೆ ‘ನ್ಯೂಯಾರ್ಕ್ ಟೈಮ್ಸ್‌’  ವರದಿ ಮಾಡಿದೆ.

ಟ್ರಂಪ್ ಅವರು ಮೂರು ಬಾರಿ ಮದುವೆಯಾಗಿದ್ದು, ಒಟ್ಟು ಐವರು ಮಕ್ಕಳಿದ್ದಾರೆ. ಇವರಲ್ಲಿ ಹಿರಿಯ ಮಗ ಡೊನಾಲ್ಡ್‌ ಟ್ರಂಪ್ ಜೂನಿಯರ್. ರೂಪದರ್ಶಿಯಾಗಿದ್ದ ವನೆಸ್ಸಾ ಹೇಡನ್ ಅವರನ್ನು 2005ರಲ್ಲಿ ಟ್ರಂಪ್ ಜ್ಯೂನಿಯರ್ ಮದುವೆಯಾಗಿದ್ದರು.

‘12 ವರ್ಷದ ಮದುವೆ ಬಾಂಧವ್ಯದಲ್ಲಿ ಇದ್ದ ನಾವು ಈಗ ನಮ್ಮ ನಮ್ಮ ದಾರಿಯಲ್ಲಿ ಹೋಗಲು ನಿರ್ಧರಿಸಿದ್ದೇವೆ’ ಎಂದು ದಂಪತಿ ಜಂಟಿ ಹೇಳಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry