ಎಸ್‌ಡಿಎಂ ಆರೋಗ್ಯ ವಿವಿಗೆ ಅನುಮತಿ ಸಿಕ್ಕಿದೆ : ಡಿ.ವೀರೇಂದ್ರ ಹೆಗ್ಗಡೆ

7

ಎಸ್‌ಡಿಎಂ ಆರೋಗ್ಯ ವಿವಿಗೆ ಅನುಮತಿ ಸಿಕ್ಕಿದೆ : ಡಿ.ವೀರೇಂದ್ರ ಹೆಗ್ಗಡೆ

Published:
Updated:
ಎಸ್‌ಡಿಎಂ ಆರೋಗ್ಯ ವಿವಿಗೆ ಅನುಮತಿ ಸಿಕ್ಕಿದೆ : ಡಿ.ವೀರೇಂದ್ರ ಹೆಗ್ಗಡೆ

ಉಜಿರೆ: ‘ಎಸ್‌ಡಿಎಂ ಎಜುಕೇಶನಲ್ ಸೊಸೈಟಿ ಆಶ್ರಯದಲ್ಲಿ ಧಾರವಾಡದಲ್ಲಿ ಎಸ್‌ಡಿಎಂ ಆರೋಗ್ಯ ವಿಶ್ವವಿದ್ಯಾಲಯ ಪ್ರಾರಂಭಿಸಲು ಸರ್ಕಾರದ ಅನುಮತಿ ದೊರಕಿದೆ. ರಾಜ್ಯಪಾಲರೂ ಅನುಮೋದನೆ ನೀಡಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಧಾರವಾಡದಲ್ಲಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜು, ಡೆಂಟಲ್ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ಫಿಜಿಯೋಥೆರಫಿ ಕಾಲೇಜು ಸೇರಿಸಿಕೊಂಡು ಎಸ್‌ಡಿಎಂ ಆರೋಗ್ಯ ವಿಶ್ವವಿದ್ಯಾಲಯ ಪ್ರಾರಂಭಿಸಲಾಗುವುದು. ಐದು ವರ್ಷಗಳ ಬಳಿಕ ಇತರ ಎಸ್‌ಡಿಎಂ ಸಂಸ್ಥೆಗಳನ್ನೂ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಳಿಸಲಾಗುವುದು ಎಂದು ಗುರುವಾರ ಇಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry