ಸೆಮಿಫೈನಲ್‌ಗೆ ರೋಜರ್‌ ಫೆಡರರ್‌

7
ಇಂಡಿಯಾನ ವೇಲ್ಸ್‌ ಮಾಸ್ಟರ್ಸ್‌ ಟೆನಿಸ್ ಟೂರ್ನಿ; ಯುವ ಆಟಗಾರ ಚುಂಗ್‌ಗೆ ಸೋಲು

ಸೆಮಿಫೈನಲ್‌ಗೆ ರೋಜರ್‌ ಫೆಡರರ್‌

Published:
Updated:
ಸೆಮಿಫೈನಲ್‌ಗೆ ರೋಜರ್‌ ಫೆಡರರ್‌

ಇಂಡಿಯಾನ ವೇಲ್ಸ್‌ (ಎಎಫ್‌ಪಿ): ಹಾಲಿ ಚಾಂಪಿಯನ್ ರೋಜರ್ ಫೆಡರರ್‌ ಇಂಡಿಯಾನ ವೇಲ್ಸ್‌ ಮಾಸ್ಟರ್ಸ್‌ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫೆಡರರ್‌ 7–5, 6–1ರಲ್ಲಿ ದಕ್ಷಿಣ ಕೊರಿಯಾದ ಯುವ ಆಟಗಾರ ಚುಂಗ್ ಹೆಯಾನ್‌ಗೆ ಸೋಲುಣಿಸಿದರು. ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಪಂದ್ಯದಲ್ಲಿ ಚುಂಗ್ ಹಾಗೂ ಫೆಡರರ್‌ ಮುಖಾಮುಖಿಯಾಗಿದ್ದರು. ಸೆಮಿಫೈನಲ್‌ನಲ್ಲಿ ಅವರು ಕ್ರೊವೇಷ್ಯಾದ ಬೋರ್ನ್‌ ಕೊರಿಕ್ ಅವರನ್ನು ಎದುರಿಸಲಿದ್ದಾರೆ.

ಬೋರ್ನ್‌ 2–6, 6–4, 7–6ರಲ್ಲಿ ಏಳನೇ ಶ್ರೇಯಾಂಕದ ಕೆವಿನ್ ಆ್ಯಂಡರ್ಸನ್‌ಗೆ ಸೋಲುಣಿಸಿದರು.

ವೀನಸ್‌ಗೆ ಜಯ: ಅಮೆರಿಕದ ವೀನಸ್‌ ವಿಲಿಯಮ್ಸ್‌ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ 6–3, 6–2ರಲ್ಲಿ ಕಾರ್ಲಾ ಸೂರೆಜ್‌ ನೆವರೊ ಅವರನ್ನು ಮಣಿಸಿ ಸೆಮಿಫೈನಲ್ ಪ್ರವೇಶಿಸಿದರು.

‘ನಾನು 16 ವರ್ಷದವಳಿದ್ದಾಗ ಇಲ್ಲಿ ಸೆಮಿಪೈನಲ್ ಪಂದ್ಯ ಆಡಿದ್ದೆ. ಆಗ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಇಲ್ಲಿ ಬಹುದಿನದ ಕನಸನ್ನು ನನಸು ಮಾಡಿಕೊಳ್ಳಲಿದ್ದೇನೆ’ ಎಂದು ವೀನಸ್ ಹೇಳಿದ್ದಾರೆ.

ರಷ್ಯಾದ ಡರಿಯಾ ಕಸಟ್ಕಿನಾ ಎದುರು ವೀನಸ್‌ ಪೈಪೋಟಿ ನಡೆಸಲಿದ್ದಾರೆ. ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಡರಿಯಾ 6–0, 6–2ರಲ್ಲಿ ಏಂಜಲಿಕ್ ಕೆರ್ಬರ್ ಅವರನ್ನು ಮಣಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry