ಹಿಲರಿ ಕ್ಲಿಂಟನ್‌ ಕೈ ಮೂಳೆ ಮುರಿತ

7

ಹಿಲರಿ ಕ್ಲಿಂಟನ್‌ ಕೈ ಮೂಳೆ ಮುರಿತ

Published:
Updated:
ಹಿಲರಿ ಕ್ಲಿಂಟನ್‌ ಕೈ ಮೂಳೆ ಮುರಿತ

ನವದೆಹಲಿ : ಭಾರತ ಪ್ರವಾಸದಲ್ಲಿರುವ ಹಿಲರಿ ಕ್ಲಿಂಟನ್‌ ಅವರು ರಾಜಸ್ಥಾನದ ಐಷರಾಮಿ ಹೋಟೆಲ್‌ನ ಬಾತ್‌ಟಬ್‌ನಲ್ಲಿ ಶುಕ್ರವಾರ ಜಾರಿ ಬಿದ್ದು ಕೈ ಮೂಳೆ ಮುರಿದುಕೊಂಡಿದ್ದಾರೆ.

‘ಗಾಯಗೊಂಡಿರುವ ಹಿಲರಿ ಅವರನ್ನು ತಪಾಸಣೆ ನಡೆಸಲಾಗಿದೆ’ ಎಂದು ಗೋಯಲ್‌ ಆಸ್ಪತ್ರೆಯ ವೈದರು ಶುಕ್ರವಾರ ತಿಳಿಸಿದರು.

‘ಸ್ಕ್ಯಾನ್‌ ಹಾಗೂ ಎಕ್ಸರೇ ನಡೆಸಲಾಗಿದ್ದು, ಬಲಗೈನ ಮಣಿಕಟ್ಟಿನ ಭಾಗದಲ್ಲಿ ಸಣ್ಣಪ್ರಮಾಣದ ಬಿರುಕು ಬಿಟ್ಟಿದ್ದು, ಕೆಲದಿನಗಳ ಕಾಲ ವಿಶ್ರಾಂತಿಯ ಅಗತ್ಯವಿದೆ’ ಎಂದು ಅವರು ತಿಳಿಸಿದ್ದಾರೆ.

ರಾಜಸ್ಥಾನದ ಜೋಧಪುರದಲ್ಲಿ ರಾಜಕುಟುಂಬ ವಾಸಿಸುತ್ತಿದ್ದ ‘ಉಮೈದ್‌ ಭವನ’ವನ್ನು ಐಷರಾಮಿ ಹೋಟೆಲ್‌ ಆಗಿ ಪರಿವರ್ತಿಸಲಾಗಿದ್ದು, ಇದರಲ್ಲೇ 70 ವರ್ಷದ ಹಿಲರಿ ಅವರು ತಂಗಿದ್ದರು. ಐದು ತಿಂಗಳ ಹಿಂದೆ ಲಂಡನ್‌ನಲ್ಲಿ ಸ್ನಾನದ ಕೋಣೆಯಲ್ಲಿ ಬಿದ್ದು, ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು.

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ ಹಿಲರಿ ಕ್ಲಿಂಟನ್‌ ಸೋತಿದ್ದರು. ತಮ್ಮ ಚುನಾವಣೆ ಹೋರಾಟದ ಕುರಿತಂತೆ ಬರೆದ ‘ವಾಟ್‌ ಹ್ಯಾಪನ್ಡ್‌’ ಪುಸ್ತಕದ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry