ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಮಿದುಳಿನಲ್ಲಿ ಕ್ಯಾನ್ಸರ್‌ ಗೆಡ್ಡೆ

ಶುಕ್ರವಾರ, ಮಾರ್ಚ್ 22, 2019
24 °C

ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಮಿದುಳಿನಲ್ಲಿ ಕ್ಯಾನ್ಸರ್‌ ಗೆಡ್ಡೆ

Published:
Updated:
ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಮಿದುಳಿನಲ್ಲಿ ಕ್ಯಾನ್ಸರ್‌ ಗೆಡ್ಡೆ

ಮುಂಬೈ : ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಶುಕ್ರವಾರ ಬಹಿರಂಗಪಡಿಸಿದ್ದಾರೆ. ಈ ಬಗೆಯ ಕ್ಯಾನ್ಸರ್‌ ದೇಹದ ವಿವಿಧ ಅಂಗಾಂಗಗಳಿಗೆ ತೊಂದರೆಯುಂಟು ಮಾಡುತ್ತದೆ.

ಕ್ಯಾನ್ಸರ್ ಇದೆ ಎಂದು ತಿಳಿದಾಗ ಕಷ್ಟವೆನಿಸಿತು. ಆದರೆ ಸ್ನೇಹಿತರು ನನ್ನಲ್ಲಿ ಭರವಸೆ ತುಂಬಿದರು ಎಂದು ಇರ್ಫಾನ್ ಹೇಳಿದ್ದಾರೆ.

‘ಇಂತಹ ಅನಿರೀಕ್ಷಿತ ಘಟನೆಗಳು ನಾವು ಇನ್ನಷ್ಟು ಬೆಳೆಯಲು ನೆರವಾಗುತ್ತವೆ. ಚಿಕಿತ್ಸೆಗಾಗಿ ನಾನು ವಿದೇಶಕ್ಕೆ ತೆರಳುತ್ತಿದ್ದು, ನಿಮ್ಮ ಹಾರೈಕೆಗಳು ಸದಾ ನನ್ನೊಂದಿಗೆ ಇರಲಿ’ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ಅನಾರೋಗ್ಯದ ಬಗ್ಗೆ ಹಬ್ಬಿದ್ದ ವದಂತಿಗಳಿಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ನರಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗಳೂ ಮಿದುಳಿಗೆ ಸಂಬಂಧಿಸಿರುವುದಿಲ್ಲ. ಬೇಕಾದರೆ ಗೂಗಲ್‌ನಲ್ಲಿ ಹುಡುಕಿ ನೋಡಿ’ ಎಂದು ವದಂತಿ ಹರಡುವವರ ಬಗ್ಗೆ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ನ್ಯೂರೊಎಂಡ್ರೊಕ್ರೈನ್ ಟ್ಯೂಮರ್ ಎಂಬುದು ಕ್ಯಾನ್ಸರ್‌ನ ಅಪರೂಪದ ಅಥವಾ ವಿಶೇಷ ಪ್ರಭೇದ ಎಂದು ‘ಏಮ್ಸ್‌’ ಸಹಾಯಕ ಪ್ರಾಧ್ಯಾಪಕ ಡಾ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಆರಂಭದಲ್ಲೇ ಪತ್ತೆಯಾದರೆ, ಅದನ್ನು ಗುಣಪಡಿಸಬಹುದು ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry