10 ಹಾಲಿ ಶಾಸಕರಿಗೆ ‘ಕೈ’ ಕೊಕ್‌?

7

10 ಹಾಲಿ ಶಾಸಕರಿಗೆ ‘ಕೈ’ ಕೊಕ್‌?

Published:
Updated:
10 ಹಾಲಿ ಶಾಸಕರಿಗೆ ‘ಕೈ’ ಕೊಕ್‌?

ಬೆಂಗಳೂರು: ಅನಾರೋಗ್ಯ‌ದ ಕಾರಣಕ್ಕೆ 10 ಹಾಲಿ ಶಾಸಕರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡದಿರಲು ಕಾಂಗ್ರೆಸ್‌ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಕೆಪಿಸಿಸಿ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಈ ಹತ್ತು ಶಾಸಕರ ಕುಟುಂಬ ಸದಸ್ಯರಿಗೆ ಅಥವಾ ಅವರು ಸೂಚಿಸುವವರಿಗೆ ಟಿಕೆಟ್‌ ನೀಡಲು ಚಿಂತನೆ ನಡೆದಿದೆ ಎಂದೂ ಗೊತ್ತಾಗಿದೆ.

ಕಲಬುರ್ಗಿ ಗ್ರಾಮೀಣ, ಬೇಲೂರು, ಕೊಳ್ಳೇಗಾಲ, ಬಾದಾಮಿ ಮುಂತಾದ ಕ್ಷೇತ್ರಗಳ ಶಾಸಕರು ಇವರಲ್ಲಿ ಸೇರಿದ್ದಾರೆ. ಉಳಿದಂತೆ, ಕಾಂಗ್ರೆಸ್‌ನ ಎಲ್ಲ ಹಾಲಿ ಶಾಸಕರಿಗೂ ಮತ್ತೆ ಟಿಕೆಟ್‌ ನೀಡಲು ಪಕ್ಷ ತೀರ್ಮಾನಿಸಿದೆ. ಜೆಡಿಎಸ್‌ನಿಂದ ಪಕ್ಷಕ್ಕೆ ಬರಲಿರುವ ಎಲ್ಲ ಏಳು, ಮತ್ತು ಬಿಜೆಪಿಯಿಂದ ಬಂದಿರುವ ಇಬ್ಬರು ಶಾಸಕರಿಗೂ ಕಾಂಗ್ರೆಸ್‌ ಟಿಕೆಟ್‌ ಸಿಗಲಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ವೀಕ್ಷಕರು ವರದಿ ನೀಡಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ತಯಾರಿಸಲಾಗಿದೆ. ಗೆಲುವೊಂದನ್ನೇ ಮಾನದಂಡವಾಗಿಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. 2013ರ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದರೂ, ಕ್ಷೇತ್ರದಲ್ಲಿ ಸಕ್ರಿಯವಾಗಿರುವವರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದೂ ಅವರೂ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry