3 ಕಡೆಯಲ್ಲಷ್ಟೇ ‘ನಮ್ಮೂರು ಬೆಂಗಳೂರು’!

7

3 ಕಡೆಯಲ್ಲಷ್ಟೇ ‘ನಮ್ಮೂರು ಬೆಂಗಳೂರು’!

Published:
Updated:
3 ಕಡೆಯಲ್ಲಷ್ಟೇ ‘ನಮ್ಮೂರು ಬೆಂಗಳೂರು’!

ಬೆಂಗಳೂರು: ಪ್ರವಾಸೋದ್ಯಮಕ್ಕೆ ಇನ್ನಷ್ಟು ಉತ್ತೇಜನ ನೀಡುವ ದೃಷ್ಟಿಯಿಂದ ಬಿಡುಗಡೆಗೊಳಿಸಿದ್ದ ‘ನಮ್ಮೂರು ಬೆಂಗಳೂರು’ ಲೋಗೊ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.

ಚರ್ಚ್‌ಸ್ಟ್ರೀಟ್‌ನಲ್ಲಿನ ‘ಬ್ಲೂ ಫ್ರಾಗ್‌’ ಹೋಟೆಲ್‌, ವೈಟ್‌ಫೀಲ್ಡ್‌ನಲ್ಲಿನ ‘ಫಿನಿಕ್ಸ್‌ ಮಾರ್ಕೆಟ್‌ಸಿಟಿ’ ಮಾಲ್‌ ಹಾಗೂ ಕಬ್ಬನ್‌ ಪಾರ್ಕ್‌ನಲ್ಲಿ ಮಾತ್ರ ಲೋಗೊವನ್ನು ಕಾಣಬಹುದಾಗಿದೆ. ಇತ್ತೀಚೆಗೆ ನಡೆದ ನಂದಿ ಹಬ್ಬ ಹಾಗೂ ರಾಚೇನಹಳ್ಳಿ ಕೆರೆಹಬ್ಬದಲ್ಲೂ ಬಳಸಲಾಗಿತ್ತು. ಇದನ್ನು ಹೊರತುಪಡಿಸಿ, ಇನ್ಯಾವುದೇ ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಲೋಗೊ ಬಳಕೆಯಾಗಿಲ್ಲ.

‘ನಮ್ಮೂರ್‌ ದಿ ಇಂಡಿಯನ್‌ ಸ್ಟೋರಿ’ ಎಂಬ ಡಿಸೈನ್‌ ಸ್ಟಾರ್ಟ್‌ಅಪ್‌ ಸಂಸ್ಥೆ ಸಿದ್ಧಪಡಿಸಿದ್ದ ಈ ಲೋಗೊ ಡಿಸೆಂಬರ್ 24ರಂದು ಅನಾವರಣಗೊಂಡಿತ್ತು. ಇಲ್ಲಿಯವರೆಗೆ ಪ್ರವಾಸೋದ್ಯಮ ಇಲಾಖೆ ಲೋಗೊವನ್ನು ಕಾನೂನುಬದ್ಧಗೊಳಿಸಿಲ್ಲ. ಕಂಪನಿಯೂ ಹಕ್ಕುಸ್ವಾಮ್ಯಕ್ಕೆ ಅರ್ಜಿ ಸಲ್ಲಿಸಿಲ್ಲ.

ನಮ್ಮೂರ್‌ ದಿ ಇಂಡಿಯನ್‌ ಸ್ಟೋರಿ ಕಂಪನಿಯ ಸಹಸಂಸ್ಥಾಪಕರಾದ ರುಶಿ ಪಟೇಲ್‌, ‘ಇನ್ನೂ ಲೋಗೊ ಹಕ್ಕು ವರ್ಗಾವಣೆಯಾಗಿಲ್ಲ. ಹೆಚ್ಚಿನ ಕಡೆಗಳಲ್ಲಿ ಬಳಕೆಯಾಗದ ಕಾರಣ ಯಾವುದೇ ದರವನ್ನೂ ವಿಧಿಸುತ್ತಿಲ್ಲ. ನಗರದಲ್ಲಿನ ಅನೇಕರಿಗೆ ಈ ರೀತಿಯ ಲೋಗೊವೊಂದಿದೆ ಎಂಬುದೇ ಗೊತ್ತಿಲ್ಲ. ಇದನ್ನು ಪ್ರಖ್ಯಾತಿಗೊಳಿಸಲು ಕಾರ್ಪೊರೇಟ್‌ ಕಂಪನಿಗಳು ಮುಂದಾಗಬೇಕು’ ಎಂದು ತಿಳಿಸಿದರು.

‘ಇದು ಜನರಿಗಾಗಿ ಇರುವ ಲೋಗೊ. ನಾವು ಕೆಲವು ಪ್ರದೇಶಗಳಲ್ಲಿ ಬಳಸಿದ್ದೇವೆ. ಇನ್ನೂ ಅನೇಕ ಕಡೆಗಳಲ್ಲಿ ಉಪಯೋಗಿಸಬೇಕಿದೆ. ನಮ್ಮೂರು ಸಂಸ್ಥೆಯೊಂದಿಗೆ ಶೀಘ್ರ ಒಪ್ಪಂದ ಮಾಡಿಕೊಳ್ಳುತ್ತೇವೆ. ಹಕ್ಕುಸ್ವಾಮ್ಯ ಪಡೆದ ನಂತರ ವ್ಯಾಪಕವಾಗಿ ಬಳಸುತ್ತೇವೆ’ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಎನ್‌.ಮಂಜುಳಾ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry