ನ್ಯಾಯಬೆಲೆ ಅಂಗಡಿ ಆರಂಭ

ಶುಕ್ರವಾರ, ಮಾರ್ಚ್ 22, 2019
28 °C

ನ್ಯಾಯಬೆಲೆ ಅಂಗಡಿ ಆರಂಭ

Published:
Updated:
ನ್ಯಾಯಬೆಲೆ ಅಂಗಡಿ ಆರಂಭ

ಬೆಂಗಳೂರು: ನಾಲ್ಕು ಕಿ.ಮೀ ನಡೆದು ಹೋಗಿ ಪಡಿತರ ತರಬೇಕಾದ ಸ್ಥಿತಿ ಇತ್ತು. ನ್ಯಾಯಬೆಲೆ ಅಂಗಡಿಗಾಗಿ 20 ವರ್ಷಗಳಿಂದ ಮನವಿ ಮಾಡುತ್ತಿದ್ದೆವು. ಈಗ ಆ ಬೇಡಿಕೆ ಈಡೇರಿದೆ.

– ಇದು ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಚಕರ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭವಾದ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದ ನಿವಾಸಿಗಳ ಹರ್ಷೋದ್ಗಾರ.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶೋಭಾ ತಿಮ್ಮೇಗೌಡ, ‘ಅರ್ಚಕರ ಬಡಾವಣೆ, ಚೌಡೇಶ್ವರಿ ನಗರದಲ್ಲಿ ಕೇವಲ 280 ಪಡಿತರ ಚೀಟಿಗಳಿವೆ. ಇಲ್ಲಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಮನವಿ ತಿರಸ್ಕರಿಸಿದ್ದರು. ಆದರೆ, ಹೊಸಬೈರೋಹಳ್ಳಿ, ಹಳೆಬೈರೋಹಳ್ಳಿ ಸೇರಿಸಿ ಅಂಗಡಿ ಮಂಜೂರು ಮಾಡಿ ಎಂದು ಶಾಸಕರು ಒತ್ತಾಯ ಮಾಡಿದ್ದರು’ ಎಂದು ಹೇಳಿದರು.

ಶಾಸಕ ಎಸ್.ಟಿ.ಸೋಮಶೇಖರ್, ‘ಚೌಡೇಶ್ವರಿ ನಗರದ ಎಲ್ಲರಿಗೂ ಇನ್ನೊಂದು ವಾರದಲ್ಲಿ ನಿವೇಶನ, ಮನೆ ಹಕ್ಕುಪತ್ರ ವಿತರಿಸಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry