ಸಾವಿರಾರು ಮಹಿಳೆಯರಿಗೆ ಸೀರೆ, ಕುಕ್ಕರ್‌ ಹಂಚಿಕೆ

7
ಕಾಂಗ್ರೆಸ್‌ ಸಮಾವೇಶದಲ್ಲಿ ವಿತರಣೆ

ಸಾವಿರಾರು ಮಹಿಳೆಯರಿಗೆ ಸೀರೆ, ಕುಕ್ಕರ್‌ ಹಂಚಿಕೆ

Published:
Updated:
ಸಾವಿರಾರು ಮಹಿಳೆಯರಿಗೆ ಸೀರೆ, ಕುಕ್ಕರ್‌ ಹಂಚಿಕೆ

ಬೆಂಗಳೂರು: ಮಹದೇವಪುರ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಎ.ಸಿ. ಶ್ರೀನಿವಾಸ್‌ ಸುಮಾರು 10 ಸಾವಿರ ಸೀರೆಗಳು ಹಾಗೂ 7 ಸಾವಿರ ಕುಕ್ಕರ್‌ಗಳನ್ನು ಹಂಚಿದರು.

ಹಗದೂರು ವಾರ್ಡ್‌ ಬಿಬಿಎಂಪಿ ಸದಸ್ಯ ಉದಯಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಶ್ರೀನಿವಾಸ್ ಅವರ ಭಾವಚಿತ್ರ ಇರುವ ಕವರ್‌ನಲ್ಲಿಯೇ ಸೀರೆ ಹಾಗೂ ಕುಕ್ಕರ್‌ ವಿತರಿಸಲಾಯಿತು. ಕವರ್‌ ಮೇಲೆ ‘ಕಾಂಗ್ರೆಸ್‌ಗೆ ಮತ ನೀಡಿ ಮಹದೇವಪುರ ಉಳಿಸಿ’ ಎಂದೂ ಮುದ್ರಿಸಲಾಗಿದೆ.

ಇದಲ್ಲದೆ, ಸಮಾವೇಶಕ್ಕೆ ಬಂದಿದ್ದ ಸುಮಾರು 15 ಸಾವಿರ ಮಂದಿಗೆ ಉದಯ್‌ಕುಮಾರ್‌ ಅವರು ಬಾಡೂಟ ಏರ್ಪಡಿಸಿದ್ದರು. ಒಂದು ವಾರದ ಹಿಂದೆ ಹಗದೂರು ವಾರ್ಡ್‌ನಲ್ಲಿ ಮಹಿಳೆಯರಿಗೆ ಟೋಕನ್‌ ವಿತರಿಸಲಾಗಿತ್ತು. ಸಾವಿರಾರು ಮಹಿಳೆಯರು ಟೋಕನ್‌ ಸಮೇತ ಕಾರ್ಯಕ್ರಮದಲ್ಲಿ ಹಾಜರಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ವಸ್ತುಗಳನ್ನು ಪಡೆಯಲು ಮುಗಿಬಿದ್ದರು.

ಎ.ಸಿ. ಶ್ರೀನಿವಾಸ್‌, ‘‍ಪ್ರತಿ ವಾರ್ಡ್‌ನಲ್ಲೂ ಇಂತಹ ಸಮಾವೇಶ ಹಮ್ಮಿಕೊಳ್ಳಲಾಗುತ್ತದೆ. ಕಾರ್ಯಕರ್ತರು ಇದಕ್ಕೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ನಾರಾಯಣಸ್ವಾಮಿ, ‘ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಅದಕ್ಕಾಗಿ ಸಮಾವೇಶಗಳನ್ನು ಏರ್ಪಡಿಸುವುದು ಅಗತ್ಯ’ ಎಂದರು.

ಇವುಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಕೆಂಪರಾಜ್ ಮತ್ತು ನಾರಾಯಣಸ್ವಾಮಿ, ಶ್ರೀನಿವಾಸ್ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ' ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry