₹2,000 ನೋಟು ರದ್ದತಿ ಇಲ್ಲ

7

₹2,000 ನೋಟು ರದ್ದತಿ ಇಲ್ಲ

Published:
Updated:
₹2,000 ನೋಟು ರದ್ದತಿ ಇಲ್ಲ

ನವದೆಹಲಿ (ಪಿಟಿಐ): ನೋಟು ರದ್ದತಿಯ ಬಳಿಕ ಚಲಾವಣೆಗೆ ತರಲಾದ ₹2,000 ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಲೋಕಸಭೆಯಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.

2016ರ ನವೆಂಬರ್‌ನಲ್ಲಿ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು.

ಹೊಸದಾಗಿ ಚಲಾವಣೆಗೆ ತಂದ ₹500 ಮುಖಬೆಲೆಯ ನೋಟಿನ ಗಾತ್ರ 66 ಮಿ.ಮೀ.x150 ಮಿ.ಮೀ ಇದೆ. ₹2,000 ಮುಖಬೆಲೆಯ ನೋಟಿನ ಗಾತ್ರ 66 ಮಿ.ಮೀ. x 166 ಮಿ.ಮೀ ಇದೆ. ಜನರಿಗೆ ಸುಲಭವಾಗಿ ಗುರುತಿಸುವುದಕ್ಕಾಗಿ ಈ ವ್ಯತ್ಯಾಸ ಮಾಡಲಾಗಿದೆ ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಪಿ. ರಾಧಾಕೃಷ್ಣನ್‌ ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

5 ನಗರಗಳಲ್ಲಿ ಪ್ಲಾಸ್ಟಿಕ್‌ ನೋಟು: ₹10 ಮತ್ತು ₹5 ಮುಖಬೆಲೆಯ ಪ್ಲಾಸ್ಟಿಕ್‌ ನೋಟುಗಳನ್ನು ಪ್ರಾಯೋಗಿಕವಾಗಿ ಐದು ನಗರಗಳಲ್ಲಿ ಚಲಾವಣೆಗೆ ತರಲು ಸರ್ಕಾರ ನಿರ್ಧರಿಸಿದೆ. ಮೈಸೂರು, ಕೊಚ್ಚಿ, ಜೈಪುರ, ಶಿಮ್ಲಾ ಮತ್ತು ಭುವನೇಶ್ವರ ನಗರಗಳಲ್ಲಿ ಈ ನೋಟುಗಳು ಚಲಾವಣೆಗೆ ಬರಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry