ವಸತಿ ಪ್ರದೇಶದಲ್ಲಿನ ಬಾರ್ ತೆರವಿಗೆ ಒತ್ತಾಯ

7

ವಸತಿ ಪ್ರದೇಶದಲ್ಲಿನ ಬಾರ್ ತೆರವಿಗೆ ಒತ್ತಾಯ

Published:
Updated:
ವಸತಿ ಪ್ರದೇಶದಲ್ಲಿನ ಬಾರ್ ತೆರವಿಗೆ ಒತ್ತಾಯ

ಬೆಂಗಳೂರು: ಯಲಹಂಕ ಉಪನಗರ ಮದರ್‌ ಡೈರಿ ವೃತ್ತದ ಬಳಿಯಲ್ಲಿನ ಐಶ್ವರ್ಯ ಬಾರ್‌ ಮತ್ತು ರೆಸ್ಟೋರಂಟ್‌ ಅನ್ನು ತೆರವುಗೊಳಿಸಲು ಒತ್ತಾಯಿಸಿ ಜನಪರ ಸಂಘಟನೆಗಳ ಸಂಯುಕ್ತವೇದಿಕೆ ಕಾರ್ಯಕರ್ತರು ಬಾರ್‌ ಎದುರು ಪ್ರತಿಭಟನೆ ನಡೆಸಿದರು.

ಪ್ರಜಾವಿಮೋಚನಾ ಚಳವಳಿಯ (ಸ್ವಾಭಿಮಾನ) ರಾಜ್ಯಘಟಕದ ಅಧ್ಯಕ್ಷ, ‘ಬಾರ್‌ ಸುತ್ತಮುತ್ತ ವಸತಿ ಪ್ರದೇಶಗಳಿವೆ. ಸಮೀಪದಲ್ಲೇ ಶಾಲೆ, ಉದ್ಯಾನ, ಆಸ್ಪತ್ರೆ ಹಾಗೂ ದೇವಸ್ಥಾನವೂ ಇದೆ. ಸಂಜೆಯಾದರೆ ಕುಡುಕರಿಂದಾಗಿ ರಸ್ತೆಯಲ್ಲಿ ವೃದ್ಧರು, ಮಹಿಳೆಯರು, ಮಕ್ಕಳು ಓಡಾಡಲು ತೊಂದರೆ ಆಗುತ್ತಿದೆ’ ಎಂದು ದೂರಿದರು.

‘ಸ್ಥಳೀಯ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ಬಾರ್‌ ತೆರವು ಮಾಡುವ ಬಗ್ಗೆ 2011ರಿಂದಲೂ ಅಬಕಾರಿ ಇಲಾಖೆಯ ಆಯುಕ್ತರು, ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ’ ಎಂದರು.

‘ಬಾರ್‌ ಮಾಲೀಕ ಪರವಾನಗಿಯನ್ನು ನವೀಕೃತಗೊಳಿಸದೆ ಅಕ್ರಮವಾಗಿ ನಡೆಸುತ್ತಿದ್ದಾರೆ. ಅಧಿಕಾರಿಗಳು, ಪೊಲೀಸರು ಇದರಲ್ಲಿ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.

‘ಬಾರ್ ತೆರವುಗೊಳಿಸುವವರೆಗೂ ನಾವು ಪ್ರತಿಭಟನೆಯನ್ನು ಮುಂದುವರಿಸುತ್ತೇವೆ. ಸ್ತ್ರೀಶಕ್ತಿ ಸಂಘಗಳು ಸೇರಿ ವಿವಿಧ ಸಂಘಟನೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಅಧಿಕಾರಿಗಳು ಸಾರ್ವಜನಿಕರ ಸುರಕ್ಷತೆಯನ್ನು ಗಮದಲ್ಲಿಟ್ಟುಕೊಂಡು ಶೀಘ್ರ ಕ್ರಮಕೈಗೊಳ್ಳಬೇಕು’ ಎಂದು ಮಾತೃ ಬಡಾವಣೆ ನಿವಾಸಿ ಲಕ್ಷ್ಮಮ್ಮ ಒತ್ತಾಯಿಸಿದರು

‘ಒಪ್ಪಂದ ಮುಗಿದು ಎರಡು ವರ್ಷವಾದರೂ ಇದುವರೆಗೆ ಖಾಲಿಮಾಡಿಲ್ಲ. ಅಲ್ಲದೆ, ಕಟ್ಟಡವನ್ನು ಹೆಚ್ಚಿನ ಹಣಕ್ಕೆ ಮತ್ತೊಬ್ಬರಿಗೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿದರೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಹೆಬ್ಬೆಟ್ಟಿನ ಗುರುತನ್ನು ಅಕ್ರಮವಾಗಿ ಸ್ಕ್ಯಾನ್‌ ಮಾಡಿಕೊಂಡು ನಕಲಿ ಕರಾರು ಒಪ್ಪಂದ ಪತ್ರ ತಯಾರಿಸಿಕೊಂಡಿದ್ದಾರೆ’ ಎಂದು ಕಟ್ಟಡ ಮಾಲೀಕರಾದ ಗೌರಮ್ಮ ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry