ರನ್‌ವೇಗೆ ಉದುರಿದ ಚಿನ್ನದ ಗಟ್ಟಿಗಳು!

7

ರನ್‌ವೇಗೆ ಉದುರಿದ ಚಿನ್ನದ ಗಟ್ಟಿಗಳು!

Published:
Updated:
ರನ್‌ವೇಗೆ ಉದುರಿದ ಚಿನ್ನದ ಗಟ್ಟಿಗಳು!

ಮಾಸ್ಕೊ (ಎಎಫ್‌ಪಿ): ಸೈಬೀರಿಯಾದ ಯಾಕುಟ್ಸಕ್‌ ವಿಮಾನ ನಿಲ್ದಾಣದ ರನ್‌ವೇನಲ್ಲಿ ಸರಕು ಸಾಗಣೆ ವಿಮಾನ ಹಾರಾಟ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಗಟ್ಟಿಗಳು ಗುರುವಾರ ಉದುರಿಬಿದ್ದಿವೆ.

ವಿಮಾನ ಹಾರಾಟ ಆರಂಭಿಸುತ್ತಿದ್ದಂತೆ ಬಾಗಿಲು ತೆರೆದುಕೊಂಡು ರನ್‌ವೇ ಮೇಲೆ ಸುಮಾರು 200 ಚಿನ್ನದ ಗಟ್ಟಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು ಎಂದು ರಷ್ಯಾದ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಚುಕೊಟ್ಟಾ ಪ್ರದೇಶದಲ್ಲಿರುವ ಕುಪೊಲ್‌ ಚಿನ್ನದ ಗಣಿಯಿಂದ ಬೆಲೆಬಾಳುವ ಲೋಹದ ಗಟ್ಟಿಗಳನ್ನು ತುಂಬಿಕೊಂಡು ಈ ವಿಮಾನ ಹೊರಟಿತ್ತು.

ಗಟ್ಟಿಗಳು ಬೀಳುತ್ತಿರುವುದು ಗೊತ್ತಾಗುತ್ತಿದ್ದಂತೆ ವಿಮಾನದ ಹಾರಾಟ ಸ್ಥಗಿತಗೊಳಿಸಿ ನಿಲ್ದಾಣಕ್ಕೆ ಮರಳಲು ಸೂಚಿಸಲಾಯಿತು. ಸ್ಥಳಕ್ಕೆ ಬಂದ ಪೊಲೀಸರು ಆ ಪ್ರದೇಶವನ್ನು ಸುಪರ್ದಿಗೆ ಪಡೆದು ಯಾರೂ ಅಲ್ಲಿಗೆ ಬರದಂತೆ ತಡೆದರು.

‘ರನ್‌ವೇನಲ್ಲಿ 3.4 ಟನ್ ತೂಕದ 172 ಚಿನ್ನದ ಗಟ್ಟಿಗಳು ದೊರೆತಿವೆ.  ವಿಮಾನದಲ್ಲಿ ಒಟ್ಟು ಒಂಬತ್ತು ಟನ್‌ ಲೋಹದ ಗಟ್ಟಿಗಳು ಇದ್ದವು’ ಎಂದು ಸೈಬೀರಿಯಾದ  ಸಚಿವರೊಬ್ಬರು ತಿಳಿಸಿದ್ದಾರೆ.

‘ಕೆನಡಾ ಮೂಲದ ಕಿನ್‌ರೊಸ್‌ ಗೋಲ್ಡ್‌ ಕಂಪನಿಯು ಕುಪೊಲ್‌ ಗಣಿಯ ಮಾಲೀಕತ್ವ ಹೊಂದಿದೆ’ ಎಂದು ಕಂಪನಿಯ ವಕ್ತಾರ ಸ್ಟಾನಿಸ್ಲವ್‌ ಬೊರುದ್ಯುಕ್‌ ಹೇಳಿದ್ದಾರೆ. ‘ಇದೊಂದು ಆಕಸ್ಮಿಕ ಘಟನೆ’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry