‘ಅಭಿವೃದ್ಧಿಯಲ್ಲಿ ಹಿನ್ನಡೆ’

7

‘ಅಭಿವೃದ್ಧಿಯಲ್ಲಿ ಹಿನ್ನಡೆ’

Published:
Updated:

ವಿಜಯಪುರ: ‘ನಗರ ವಾಸಿಗಳು ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿವೆ. ಆದರೆ, ಹಳ್ಳಿಗಳು ಅಭಿವೃದ್ಧಿ ವಿಷಯದಲ್ಲಿ ಹಿಂದುಳಿದಿರುವುದು ನೋವಿನ ಸಂಗತಿ’ ಎಂದು ಯು.ಎಸ್.ಪೂಚಾರಿ ಹೇಳಿದರು.

ನಗರ ಹೊರವಲಯದ ಇಟ್ಟಂಗಿಹಾಳದಲ್ಲಿ ಈಚೆಗೆ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಹಾಗೂ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಿಜ್ಞಾನಕ್ಕಾಗಿ ಯುವಕರು ಹಾಗೂ ವೈಜ್ಞಾನಿಕ ಮನೋಭಾವ ಧ್ಯೇಯವಾಗಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಸೇವಾ ಶಿಬಿರದಲ್ಲಿ ಮಾತನಾಡಿರು.

‘ವಿಶೇಷ ಸೇವಾ ಶಿಬಿರದ ಮೂಲಕ ಎಷ್ಟು ಮನೆಗಳಲ್ಲಿ ಶೌಚಾಲಯಗಳಿವೆ, ಶೌಚಾಲಯ ಬಳಸುವ ಮನೆಯ ಸದಸ್ಯರ ಸಂಖ್ಯೆ, ಶೌಚಾಲಯ ನಿರ್ಮಾಣ ಮಾಡದಿರಲು ಕಾರಣವೇನು ಎಂಬುದರ ಕುರಿತು ಜನರಲ್ಲಿ ಚರ್ಚಿಸಿದಾಗ, ಹೆಚ್ಚಿನ ಪ್ರಮಾಣದ ಜನರು ಬಹಿರ್ದಸೆ ಶೌಚಕ್ಕೆ ಅವಲಂಬಿತರಾಗಿರುವುದು ತಿಳಿದು ಬಂದಿದೆ’ ಎಂದು ಹೇಳಿದರು. ಪ್ರಾಚಾರ್ಯ ಡಾ.ಕೆ.ಜಿ.ಪೂಜಾರಿ, ಪ್ರೊ.ಜಿ.ಆರ್.ಅಂಬಲಿ. ಗಂಗಾಧರ ಗೇಂಢ. ರವೀಂದ್ರ ಕೋಮಾರ. ಬಿ.ಎಸ್.ಬಗಲಿ. ಕೆ.ಎಂ.ಲಮಾನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry