ಪಕ್ಷ ಸಂಘಟನೆಗೆ ಶ್ರಮಿಸುವೆ: ಪಾಟೀಲ

7

ಪಕ್ಷ ಸಂಘಟನೆಗೆ ಶ್ರಮಿಸುವೆ: ಪಾಟೀಲ

Published:
Updated:

ಬೀಳಗಿ: ‘ಹೈಕಮಾಂಡ್ ನನ್ನ ಮೇಲೆ ನಂಬಿಕೆ ಇಟ್ಟು ಪಕ್ಷ ಸಂಘಟನೆಯ ಜವಾಬ್ದಾರಿ ನೀಡಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವೆ ಎಂದು ಕೆಪಿಸಿಸಿ ನೂತನ ಕಾರ್ಯದರ್ಶಿ ಎಂ.ಎನ್. ಪಾಟೀಲ ಹೇಳಿದರು.

ಪಟ್ಟಣದಲ್ಲಿ ವಿವಿಧ ಸಂಘಟನೆಯ ಮುಖಂಡರು, ಅಭಿಮಾನಿ ಬಳಗ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಸರ್ಕಾರ ರೈತರು, ದಲಿತರು, ಹಿಂದುಳಿದವರು ಸೇರಿದಂತೆ ಸರ್ವರ ಅಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಕೈಗೊಂಡಿದೆ. ಶಾಸಕ ಜೆ.ಟಿ. ಪಾಟೀಲ ಕೂಡ ಬೀಳಗಿ ಮತಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವುಗಳ ಸಂಪೂರ್ಣ ಮಾಹಿತಿ ಮತದಾರರ ಮನೆ-–ಮನಗಳಿಗೆ ಮುಟ್ಟಿಸುವ ಕೆಲಸ ಕೈಗೊಳ್ಳಲಾಗುವುದು’ ಎಂದರು.

ವೈ.ಎಂ .ಬೋರ್ಜ, ಹಾಶಿಂಪೀರ್ ಮುಜಾವರ, ರಮೇಶ ಹುಗ್ಗಿ, ನಿಂಗಪ್ಪ ಮೇಟಿ, ರಾಮಣ್ಣ ವಾಲಿಕಾರ, ಬಸವರಾಜ ಬಡಿಗೇರ, ರಸೂಲ್‌ಸಾಬ್ ಬಾಗೂರ, ಸಿದ್ದಲಿಂಗಪ್ಪ ನಾಯ್ಕರ, ಸುನಿಲ್‌ಗೌಡ ಶಿರೋಳ, ಮಾಳಪ್ಪ ಹಿರೊಳ್ಳಿ, ಶಿವಪ್ಪ ಗಂಗಲ, ಹನಮಂತಗೌಡ ಪಾಟೀಲ, ವೆಂಕಟೇಶ ಪಾಂಡಪ್ಪ ನಾಯಿಕ, ಮಲ್ಲಿಕಾರ್ಜುನ ಪಲ್ಲೇದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry