ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷರಾಗಿ ಪ್ರೊ.ರಂಗಪ್ಪ ಆಯ್ಕೆ

7

ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷರಾಗಿ ಪ್ರೊ.ರಂಗಪ್ಪ ಆಯ್ಕೆ

Published:
Updated:

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮಣಿಪುರದ ಇಂಫಾಲದಲ್ಲಿ ಗುರುವಾರ ನಡೆದ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ ಸರ್ವ ಸದಸ್ಯರ ಸಭೆಯಲ್ಲಿ ಪ್ರೊ.ರಂಗಪ್ಪ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ. ಅಧ್ಯಕ್ಷರ ಸ್ಥಾನಕ್ಕೆ ಮೂರು ತಿಂಗಳ ಹಿಂದೆ ಚುನಾವಣೆ ನಡೆದಿತ್ತು.

ಚಲಾವಣೆಯಾಗಿದ್ದ 59 ಮತಗಳ ಪೈಕಿ ಅಸಿಂಧುವಾಗಿದ್ದ 2 ಮತಗಳನ್ನು ಬಿಟ್ಟು, ಬಾಕಿ 57 ಮತಗಳು ಪ್ರೊ.ರಂಗಪ್ಪ ಅವರ ಪಾಲಾಗಿವೆ. ಹಾಗಾಗಿ, ಶೇ 100 ಮತಗಳೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿ ಆಯ್ಕೆಯಾದ ಕನ್ನಡಿಗರ ಪೈಕಿ ವಿಜ್ಞಾನಿಗಳಾದ ಪ್ರೊ.ಯು.ಆರ್‌.ರಾವ್, ಡಾ.ಕಸ್ತೂರಿ ರಂಗನ್‌, ಪ್ರೊ.ಸಿ.ಎನ್.ಆರ್.ರಾವ್ ಇದ್ದರು. ಪ್ರೊ.ರಂಗಪ್ಪ ಅವರು ಅಧ್ಯಕ್ಷರಾಗಿರುವ ಸಮ್ಮೇಳನವು 2020ರಲ್ಲಿ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry