‘ನಮಗೆ ಬೇಕಿರುವುದು ಬದುಕಿನ ಪಾಠ’

7
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ

‘ನಮಗೆ ಬೇಕಿರುವುದು ಬದುಕಿನ ಪಾಠ’

Published:
Updated:
‘ನಮಗೆ ಬೇಕಿರುವುದು ಬದುಕಿನ ಪಾಠ’

ಮಡಿಕೇರಿ: ‘ಮೊಬೈಲ್ ಬಿಟ್ಟು, ಪುಸ್ತಕ ಓದಿದರೆ ಜೀವನ ಪೂರ್ತಿ ಉತ್ತಮ ಬದುಕು ರೂಪಿಸಿಕೊಳ್ಳಬಹುದು’ ಎಂದು ಸಾಹಿತಿ ನಾಗೇಶ್ ಕಾಲೂರು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮಗೆ ಬೇಕಿರುವುದು ಬದುಕಿನ ಪಾಠ. ಬದುಕಿನ ಶಿಕ್ಷಣ ಕಲಿತಾಗ ಮಾತ್ರ ಬದುಕಿಗೆ ಮೌಲ್ಯ ದೊರೆಯುತ್ತದೆ’ ಎಂದು ಹೇಳಿದರು.

‘ಮನುಷ್ಯತ್ವ ಇಲ್ಲದ ಶಿಕ್ಷಣಕ್ಕೆ ಕಿಂಚಿತ್ತೂ ಬೆಲೆಯಿಲ್ಲ; ಅಹಂಕಾರದಿಂದ ಮೆರೆಯದೇ ವಿದ್ಯಾರ್ಥಿಗಳು ಮಾನವೀಯ ಮೌಲ್ಯವಿರುವ ಶಿಕ್ಷಣ ಕಲಿಯಬೇಕು’ ಎಂದು ಸಲಹೆ ಮಾಡಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಸಿ. ಜೆನ್ನಿಫರ್ ಲೋಲಿಟ ಮಾತನಾಡಿ, ‘ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೇ ಇರುವ ಸಮಯವನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ತಲುಪಿ ಎಂದು ಕರೆ ನೀಡಿದರು.

ಕೈಗಾರಿಕೋದ್ಯಮಿ ಸುಕೀಶ್ ಚಂದ್ರಪ್ಪ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕ ಎನ್.ಪಿ. ಸತೀಶ್, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ನಮೀತಾ, ಅರ್ಥಶಾಸ್ತ್ರ ವಿಭಾಗದ ಮಹೇಶ್, ಪ್ರಾಧ್ಯಾಪಕ ದಾಮೊದರ್, ಅರಿಣಿ, ಸರಸ್ವತಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry