ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ: ಸಚಿವ ರಾಯರಡ್ಡಿ ಪ್ರಶ್ನೆ

7

ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ: ಸಚಿವ ರಾಯರಡ್ಡಿ ಪ್ರಶ್ನೆ

Published:
Updated:
ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ: ಸಚಿವ ರಾಯರಡ್ಡಿ ಪ್ರಶ್ನೆ

ಕೊಪ್ಪಳ: ‘ಅಧಿಕಾರಿಗಳೇನು ಮೇಲಿನಿಂದ ಇಳಿದು ಬಂದವರಾ? ಸರ್ಕಾರ ವರ್ಗಾವಣೆ ಮಾಡಿದಲ್ಲಿಗೆ ಹೋಗಬೇಕು’ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅನೂಪ್ ಎ. ಶೆಟ್ಟಿ ಅವರನ್ನು ಕೇವಲ 9 ತಿಂಗಳ ಅವಧಿಯಲ್ಲಿ ವರ್ಗಾವಣೆ ಮಾಡಿದ ಕ್ರಮವನ್ನು ವರದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ‘9 ತಿಂಗಳಲ್ಲ 9 ದಿನಗಳಲ್ಲೇ ಆದೇಶ ಕೊಟ್ಟರೂ ಹೋಗಬೇಕು’ ಎಂದರು.

‘ಅಧಿಕಾರಿಗಳು ಸರ್ಕಾರಕ್ಕಿಂತ ದೊಡ್ಡವರಲ್ಲ. ಅವರನ್ನು ಸುಮ್ಮನೆ ಹೀರೋ ಮಾಡುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry