3 ವರ್ಷದ ಹಿಂದೆ ಕಾಣೆಯಾಗಿದ್ದ ಬಾಲಕ ಪತ್ತೆ

7

3 ವರ್ಷದ ಹಿಂದೆ ಕಾಣೆಯಾಗಿದ್ದ ಬಾಲಕ ಪತ್ತೆ

Published:
Updated:

ಮಂಗಳೂರು: ಮೂರು ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನನ್ನು ಬರ್ಕೆ ಠಾಣೆಯ ಪೊಲೀಸರು ಮುಂಬೈನಲ್ಲಿ ಪತ್ತೆ ಮಾಡಿದ್ದಾರೆ.

2015 ರ ಮಾರ್ಚ್ 16 ರಂದು ಬಾಲಕ ಕಾಣೆಯಾದ ಕುರಿತು ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ರೀತಿಯಲ್ಲಿ ಈತನ ಪತ್ತೆ ಕಾರ್ಯ ನಡೆಸಿದರೂ, ಪ್ರಯೋಜನ ಆಗಿರಲಿಲ್ಲ. ಕೆಲ ದಿನಗಳ ಹಿಂದೆ ಬಾಲಕ ತನ್ನ ಫೇಸ್‌ಬುಕ್‌ ಖಾತೆಯನ್ನು ಉಪಯೋಗಿಸಿದ್ದು, ಫೇಸ್‌ಬುಕ್‌ ಖಾತೆಯ ಐಪಿ ವಿಳಾಸವನ್ನು ಪತ್ತೆ ಮಾಡಲಾಯಿತು. ಅದರ ಆಧಾರದ ಮೇಲೆ ಬಾಲಕ ಮುಂಬೈನಲ್ಲಿ ಇರುವುದನ್ನು ಪತ್ತೆ ಹಚ್ಚಲಾಯಿತು.

ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಬರ್ಕೆ ಠಾಣೆ ಇನ್‌ಸ್ಪೆಕ್ಟರ್‌ ರಾಮಕೃಷ್ಣ ಕೆ.ಕೆ., ಸಿಬ್ಬಂದಿ ನಾಗರಾಜ್‌, ಮಹೇಶ್‌ ಪಾಟೀಲ್‌, ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry