ಜಿಲ್ಲೆಯಲ್ಲಿ ₹ 2,277 ಕೋಟಿ ಸಾಲ ವಿತರಣೆ

7

ಜಿಲ್ಲೆಯಲ್ಲಿ ₹ 2,277 ಕೋಟಿ ಸಾಲ ವಿತರಣೆ

Published:
Updated:

ಮಂಡ್ಯ: 'ಜಿಲ್ಲೆಯಾದ್ಯಂತ ಎಲ್ಲಾ ಬ್ಯಾಂಕ್‌ಗಳು ವಿವಿಧ ಕ್ಷೇತ್ರಗಳಲ್ಲಿ ₹ 2,277 ಕೋಟಿ ಸಾಲ ವಿತರಣೆ ಮಾಡಿದ್ದು ಶೇ 85 ರಷ್ಟು ಪ್ರಗತಿ ಸಾಧಿಸ ಲಾಗಿದೆ’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕ ಎನ್.ಜಿ. ಪ್ರಭುದೇವ್ ಹೇಳಿದರು.

ಮಂಡ್ಯದ ವಿಬ್‍ಸಿಟಿಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ಮತ್ತು ಜಿಲ್ಲಾಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

'ಪ್ರಸಕ್ತ ವರ್ಷಗಳಲ್ಲಿ ಒಟ್ಟು ₹ 2680 ಕೋಟಿ ಸಾಲ ನೀಡುವ ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ ₹ 2,277 ಕೋಟಿ ಸಾಲವನ್ನು ವಿವಿಧ ಕ್ಷೇತ್ರಗಳಿಗೆ ನೀಡಲಾಗಿದೆ. ಪ್ರಗತಿಯ ಮಾಹಿತಿಯನ್ನು ಆರ್.ಬಿ.ಐ ನಬಾರ್ಡ್, ಜಿಲ್ಲಾ ಪಂಚಾಯಿತಿ ವತಿಯಿಂದ ಪರಿಶೀಲನೆ ಮಾಡಲಾಗುತ್ತಿದ್ದು, ಎಲ್ಲಾ ಮಾಹಿತಿ ನೀಡಿದ್ದೇವೆ. ಮುಂದಿನ ವರ್ಷದ ಆರ್ಥಿಕ ವರ್ಷದಲ್ಲಿ ₹ 4,440 ಕೋಟಿ ಹಣವನ್ನು ಹಣವನ್ನು ಸಾಲ ನೀಡಲು ಗುರಿಯನ್ನು ಹೊಂದಿದ್ದೇವೆ. ಇದರಲ್ಲಿ ₹ 2,600 ಕೋಟಿ ಬೆಳೆ ಸಾಲಕ್ಕೆ ಗುರಿ ಇಟ್ಟುಕೊಂಡಿದೆ. ಕೃಷಿ ಸಾಲಕ್ಕಾಗಿ ಅರ್ಜಿ ಹಾಕಿರುವ ಫಲಾನುಭವಿಗಳಿಗೆ ಶೀಘ್ರವಾಗಿ ಸಾಲ ಮಂಜೂರು ಮಾಡಲಾ ಗುವುದು' ಎಂದರು ಹೇಳಿದರು.

ಜಿ.ಪಂ. ಯೋಜನಾ ನಿರ್ದೇಶಕ ಗಣಪತಿ ನಾಯ್ಕ, ವಿಬ್‌ಸಿಟಿ ನಿರ್ದೇ ಶಕ ಎಚ್.ಎಂ. ರವಿ, ವಿಜಯ ಬ್ಯಾಂಕ್‌ ಪ್ರಾದೇಶಿಕ ವ್ಯವಸ್ಥಾಪಕ ಸತ್ಯನಾರಾ ಯಣ, ಸುಧೀರ್, ನಟರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry