7

ರಾಜ್ಯದಲ್ಲೂ ತ್ರಿಪುರಾ ಫಲಿತಾಂಶ ಬರಲಿದೆ: ವಿನೋದ್‌ ಗೋಯಕರ್‌

Published:
Updated:

ಹರಪನಹಳ್ಳಿ: ‘ತ್ರಿಪುರಾ ವಿಧಾನಸಭಾ ಫಲಿತಾಂಶವೇ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಇಲ್ಲಿಯೂ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ’ ಎಂದು ಬಿಜೆಪಿ ರಾಷ್ಟ್ರೀಯ ಎಸ್‌.ಸಿ ಮೋರ್ಚಾದ ಅಧ್ಯಕ್ಷ ವಿನೋದ್ ಗೋಯಕರ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಪ್ರದೇಶದ ಉಪ ಚುನಾವಣೆ ಫಲಿತಾಂಶ ಕರ್ನಾಟಕಕ್ಕೆ ದಿಕ್ಸೂಚಿಯಾಗಲ್ಲ. ಅದರ ಬದಲಾಗಿ ತ್ರಿಪುರಾ ರಾಜ್ಯದ ಫಲಿತಾಂಶವೇ ಇಲ್ಲಿಯೂ ಮರುಕಳಿಸಲಿದೆ’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಅನುದಾನದಲ್ಲಿ ಎಸ್‌ಸಿ–ಎಸ್‌ಟಿ ಸಮುದಾಯಕ್ಕೆ ಖರ್ಚು ಮಾಡುತ್ತಿದ್ದಾರೆ. ಈ ಹಣ ಮೋದಿ ಸರ್ಕಾರದ್ದು, ಆದರೆ, ಸಿದ್ದರಾಮಯ್ಯ ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದರು.

ತಾಲ್ಲೂಕು ಅಧ್ಯಕ್ಷ ಕೆ.ಲಕ್ಷ್ಮಣ, ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ಡಾ.ರಮೇಶಕುಮಾರ, ಆರ್.ಲೋಕೇಶ್, ಕರೆಗೌಡ್ರು, ಸಿದ್ದಪ್ಪ, ನಾಗೇಂದ್ರಪ್ಪ, ಚಾರೆಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry