ಸಂಸದರ ವಸತಿ ಗೃಹಪ್ರವೇಶ

7

ಸಂಸದರ ವಸತಿ ಗೃಹಪ್ರವೇಶ

Published:
Updated:
ಸಂಸದರ ವಸತಿ ಗೃಹಪ್ರವೇಶ

ಹಾಸನ: ಸಂಸದ ಎಚ್‌.ಡಿ. ದೇವೇಗೌಡ 4 ವರ್ಷಗಳ ಹಿಂದೆ ಮಾಡಿದ್ದ ಮನವಿ ಪುರಸ್ಕರಿಸಿದ ಜಿಲ್ಲಾಡಳಿತ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಸಮೀಪ ಕಟ್ಟಡ ನಿರ್ಮಿಸಿಕೊಟ್ಟಿದ್ದು, ಸಂಸದರ ವಸತಿ ಗೃಹ ಪ್ರವೇಶ ಶಾಸ್ತ್ರೋಕ್ತವಾಗಿ ನೆರವೇರಿತು.

36 ಲಕ್ಷ ವೆಚ್ಚದ ಕಟ್ಟಡದಲ್ಲಿ 4 ಬೆಡ್‌ರೂಂ, ದೇವರ ಕೋಣೆ ಹಾಗೂ ಲಿಫ್ಟ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ದೇವೇಗೌಡ ಪತ್ನಿ ಚನ್ನಮ್ಮ, ಸೊಸೆ ಭವಾನಿ ರೇವಣ್ಣ ಸೂತನ ವಸತಿಗೃಹದ ಹೊಸ್ತಿಲಿಗೆ ಪೂಜೆ ಸಲ್ಲಿಸಿದರು.

ನಂತರ ಗೋವಿಗೆ ವಿಶೇಷ ಪೂಜೆ ಸಲ್ಲಿಸಿ ಗೃಹ ಪ್ರವೇಶಿಸಲಾಯಿತು. ಭವಾನಿ ರೇವಣ್ಣ ಹಾಲು ಉಕ್ಕಿಸುವ ಮೂಲಕ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry