ವಿವಿಧ ಕಾಮಗಾರಿಗಳಿಗೆ ಶಾಸಕ ಬಣಕಾರ ಚಾಲನೆ

7

ವಿವಿಧ ಕಾಮಗಾರಿಗಳಿಗೆ ಶಾಸಕ ಬಣಕಾರ ಚಾಲನೆ

Published:
Updated:

ಹಿರೇಕೆರೂರ: ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ- ೩ರ ಅಡಿಯಲ್ಲಿ ರಸ್ತೆ ಕಾಮಗಾರಿಗೆ 16ನೇ ವಾರ್ಡ್‌ ಮುಗಳೀಹಳ್ಳಿ ಪ್ಲಾಟ್‌ನಲ್ಲಿ ಶಾಸಕ ಯು.ಬಿ.ಬಣಕಾರ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಣಕಾರ, ‘ನಗರೋತ್ಥಾನ ಯೋಜನೆಯಲ್ಲಿ ₹ 140 ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳು ನಡೆಯಲಿದ್ದು, ಪೈಪ್‌ಲೈನ್‌ ಅಳವಡಿಸುವ ಕಾಮಗಾರಿಗಳು ಹಾಗೂ ವಿಶೇಷ ಘಟಕ ಯೊಜನೆ, ಗಿರಿಜನ ಉಪ ಯೋಜನೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ಕಾಮಗಾರಿಗಳನ್ನು ನಿಗದಿಪಡಿಸಿದ ಮಾನದಂಡದಲ್ಲಿ ನಿರ್ವಹಿಸಿ, ನಿಗದಿತ ಕಾಲಾವಧಿಯಲ್ಲಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು’ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಆರ್.ವಿ. ಹಂಪಾಳಿ, ಉಪಾಧ್ಯಕ್ಷೆ ಶಿವಲೀಲಾ ಎಸ್. ರಂಗಕ್ಕನವರ, ಸದಸ್ಯರಾದ ಶಿವಕುಮಾರ ತಿಪ್ಪಶೆಟ್ಟಿ, ಗೀತಾ ದಂಡಗಿಹಳ್ಳಿ, ಕುಸುಮಾ ಬಣಕಾರ, ಮಮತಾ ಮಳವಳ್ಳಿ, ಮಹ್ಮದ್ ಹುಸೇನ್ ವಡ್ಡಿನಕಟ್ಟಿ, ರಘು ಮಾಳಮ್ಮನವರ, ರತ್ನಮ್ಮ ತಿಪ್ಪಣ್ಣನವರ, ರಮೇಶ ಬ. ತೋರಣಗಟ್ಟಿ, ಮುಜೀಬ್‌ ರಿಕಾರ್ಟಿ, ನಾಮನಿರ್ದೇಶನ ಸದಸ್ಯರಾದ ಬಸವರಾಜ ಕಮಡೊಳ್ಳಿ, ಆಶ್ರಯ ಕಮಿಟಿ ಸದಸ್ಯರಾದ ಮಹ್ಮದ್‌ ಯೂಸೂಫ್‌, ಅಬ್ದುಲ್‌ ಮುನಾಫ್ ಖತೀಬ, ಮುಖ್ಯಾಧಿಕಾರಿ ಆರ್.ಎಸ್. ಪವಾರ, ಎಂಜಿನಿಯರ್‌ ಸಂಗಮೇಶ ಹಾದಿಮನಿ, ರಮೇಶ ಡಿ.ತಿರಕಪ್ಪನವರ, ನಾಗರಾಜ ಶ್ಯಾಮನೂರು, ಗುತ್ತಿಗೆದಾರ ಆರ್.ಎನ್.ಗಂಗೋಳ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry