ಭಾರತದ 6.5 ಲಕ್ಷ ಮಕ್ಕಳು ಪ್ರತಿದಿನ ಧೂಮಪಾನ ಮಾಡುತ್ತಾರೆ!

7

ಭಾರತದ 6.5 ಲಕ್ಷ ಮಕ್ಕಳು ಪ್ರತಿದಿನ ಧೂಮಪಾನ ಮಾಡುತ್ತಾರೆ!

Published:
Updated:
ಭಾರತದ 6.5 ಲಕ್ಷ ಮಕ್ಕಳು ಪ್ರತಿದಿನ ಧೂಮಪಾನ ಮಾಡುತ್ತಾರೆ!

ನವದೆಹಲಿ: ಭಾರತದಲ್ಲಿ ವಾಸಿಸುತ್ತಿರುವ 10 ರಿಂದ 14 ವರ್ಷ ವಯಸ್ಸಿನ ಸುಮಾರು 6.25 ಲಕ್ಷಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಧೂಮಪಾನ ಮಾಡುತ್ತಾರೆ ಎಂದು ಕಳೆದ ವಾರ ಬಿಡುಗಡೆಯಾಗಿರುವ ಗ್ಲೋಬಲ್‌ ಟೊಬ್ಯಾಕೋ ಅಟ್ಲಾಸ್‌ ಅಂಕಿ ಅಂಶದಿಂದ ತಿಳಿದು ಬಂದಿದೆ.

10.3 ಕೋಟಿ ಯುವಕರು(15 ವರ್ಷಕ್ಕಿಂತ ಮೇಲ್ಪಟ್ಟವರು) ನಿತ್ಯ ಧೂಮಪಾನ ಮಾಡುತ್ತಿದ್ದು, ಇದಕ್ಕಾಗಿ ₹ 1.81 ಲಕ್ಷ ಕೋಟಿಗೂ ಹೆಚ್ಚು ವೆಚ್ಚವಾಗುತ್ತಿದೆ.

ಪ್ರತಿವರ್ಷ ಭಾರತದಲ್ಲಿ ತಂಬಾಕು ಸಂಬಂಧಿ ಖಾಯಿಲೆಗಳಿಂದಾಗಿ 9,32,600 ಜನರು ಸಾವಿಗೀಡಾಗುತ್ತಿದ್ದು, ಪ್ರತಿ ವಾರದ ಸರಾಸರಿ ಸಾವಿನ ಸಂಖ್ಯೆ 17,887  ಆಗುತ್ತದೆ ಎಂಬ ಅಂಶ ಅಮೆರಿಕ ಕ್ಯಾನ್ಸರ್‌ ಸೊಸೈಟಿ ಸಿದ್ಧಪಡಿಸಿರುವ ಟೊಬ್ಯಾಕೋ ಅಟ್ಲಾಸ್‌ ವರದಿಯಲ್ಲಿ ಉಲ್ಲೇಖವಾಗಿದೆ.

ಮಹಿಳೆಯರಗೆ ಹೋಲಿಸಿದರೆ ಧೂಮಪಾನ ಮಾಡುವ ಪುರುಷರ ಸಂಖ್ಯೆ ಅಧಿಕವಾಗಿದ್ದು, 2016ರಲ್ಲಿ ಭಾರತದಲ್ಲಿ 8,200 ಕೋಟಿ ಸಿಗರೇಟ್‌ ಉತ್ಪಾದಿಸಲಾಗಿದೆ ಎಂದೂ ಅಂದಾಜಿಸಲಾಗಿದೆ.

ಉಳಿದಂತೆ 17.1 ಕೋಟಿಗೂ ಹೆಚ್ಚು ಜನ ತಂಬಾಕು ಸೇವಿಸುತ್ತಿದ್ದು, ಇದು ಬಾಯಿ, ಗಂಟಲು ಕ್ಯಾನ್ಸರ್‌ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry