ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಟ್ 2018: ರಸಾಯನ ಶಾಸ್ತ್ರದಲ್ಲಿ ರೈತನ ಮಗ ಟಾಪರ್

Last Updated 17 ಮಾರ್ಚ್ 2018, 14:30 IST
ಅಕ್ಷರ ಗಾತ್ರ

ಲಖನೌ: 'ಗ್ರ್ಯಾಜುಯೇಟ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಎಂಜಿನಿಯರಿಂಗ್‌' (ಗೇಟ್‌) ಪರೀಕ್ಷೆಯಲ್ಲಿ ಲಖನೌ ಮೂಲದ ರೈತರ ಮಗ ರಸಾಯನ ಶಾಸ್ತ್ರ ವಿಷಯದಲ್ಲಿ ದೇಶಕ್ಕೆ ಪ್ರಥಮ ರ್‍ಯಾಂಕ್ ಪಡೆದಿದ್ದಾನೆ.

ಗೇಟ್ ಪರೀಕ್ಷಾ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು ಪ್ರಶಾಂತ್ ಗುಪ್ತಾ ಎಂಬ ವಿದ್ಯಾರ್ಥಿ 100 ಅಂಕಗಳಲ್ಲಿ  ಶೇ.71.67 ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾನೆ.

ಹತ್ತರೊಳಗೆ ರ್‍ಯಾಂಕ್ ಪಡೆಯಬೇಕೆಂಬ ಗುರಿ ಹೊಂದಿದ್ದೆ, ಆದರೆ ಕೆಮಿಸ್ಟ್ರಿಯಲ್ಲಿ ಟಾಪ್ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಕ್ರಿಕೆಟ್ ಮತ್ತು ಓದು ತುಂಬಾ ಇಷ್ಟ ಪಡುವ ಈ ಯುವಕ ಗೇಟ್ ಪರೀಕ್ಷೆ ಪಾಸಾಗುವುದು ಹೇಗೆ ಎಂಬುದರ ಬಗ್ಗೆ ಪುಸ್ತಕ ಬರೆಯಬೇಕೆಂಬ ಇಚ್ಛೆ ವ್ಯಕ್ತ ಪಡಿಸಿದ್ದಾನೆ.

ಗೇಟ್ ಪರೀಕ್ಷೆ ಆಕಾಂಕ್ಷಿಗಳಿಗೆ ಕಷ್ಟವಾಗಬಾರದು ಪರೀಕ್ಷೆಗೆ ಸಹಾಯ ಮಾಡಲು ಕೆಮೆಸ್ಟ್ರಿ ವಿಷಯದಲ್ಲಿ ಪುಸ್ತಕಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪರೀಕ್ಷೆ ಪಾಸಾಗಲು ವಿದ್ಯಾರ್ಥಿಗಳಿಗೆ ನೆರವಾಗುವಂತ ಪುಸ್ತಕಗಳನ್ನು ಬರೆಯಲು ನಾನು ನಿರ್ಧರಿಸಿದ್ದೇನೆ ಎಂದು ಪ್ರಶಾಂತ್ ಹೇಳಿದ್ದಾರೆ. ಉತ್ತರಪ್ರದೇಶ ಬೋರ್ಡ್ ಸ್ಕೂಲ್‍ನಲ್ಲಿ ಕಲಿತ ಪ್ರಶಾಂತ್ 2015ರಲ್ಲಿ ಬಿಹೆಚ್‍ಯುನಿಂದ ಪದವಿ ಮತ್ತು 2017ರಲ್ಲಿ ಐಐಟಿ ದೆಹಲಿಯಿಂದ ಸ್ನಾತಕೋತ್ತರ ಪದವಿ ಪೂರೈಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT