ವೈದ್ಯಕೀಯ ಕಾಲೇಜಿಗೆ ದೇಹದಾನ

7

ವೈದ್ಯಕೀಯ ಕಾಲೇಜಿಗೆ ದೇಹದಾನ

Published:
Updated:

ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯ ನಿವಾಸಿ ಟಿ.ಎ.ಭಾಗ್ಯಲಕ್ಷ್ಮಮ್ಮ (93) ಶುಕ್ರವಾರ ರಾತ್ರಿ ಮೃತಪಟ್ಟಿದ್ದು, ದೇಹವನ್ನು ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಾನ ಮಾಡಲಾಗಿದೆ.

ಭಾಗ್ಯಲಕ್ಷ್ಮಮ್ಮ ಅವರ ಇಚ್ಛೆಯಂತೆ ನೇತ್ರಗಳು ಮತ್ತು ದೇಹವನ್ನು ಕುಟುಂಬದವರು ದಾನ ಮಾಡಿದ್ದಾರೆ.

ಸುಬ್ಬಯ್ಯ ವೈದ್ಯಕೀಯ ವಿದ್ಯಾಲಯದ ಡಾ.ನಾಗೇಂದ್ರ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ನೇತ್ರಗಳನ್ನು ಶಿವಮೊಗ್ಗದ ಶಂಕರ್‌ ಕಣ್ಣಿನ ಆಸ್ಪತ್ರೆಗೆ ದಾನ ಮಾಡಿದ್ದಾರೆ. ದೇಹವನ್ನು ನಮ್ಮ ವಿದ್ಯಾಲಯಕ್ಕೆ ನೀಡಿದ್ದಾರೆ. ಶನಿವಾರ ಬೆಳಿಗ್ಗೆ ಚಿಕ್ಕಮಗಳೂರಿನಿಂದ ದೇಹವನ್ನು ವಿದ್ಯಾಲಯಕ್ಕೆ ತರಲಾಯಿತು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry