ಗಾಯಗೊಂಡ ಕಾಡಾನೆ ಸಾವು

7

ಗಾಯಗೊಂಡ ಕಾಡಾನೆ ಸಾವು

Published:
Updated:
ಗಾಯಗೊಂಡ ಕಾಡಾನೆ ಸಾವು

ಕುಶಾಲನಗರ: ರಂಗಸಮುದ್ರ ಸಮೀಪದ ಕಾಫಿ ತೋಟವೊಂದರ ಕೆರೆಯಿಂದ ರಕ್ಷಿಸಿದ್ದ ಗಾಯಗೊಂಡ ಕಾಡಾನೆ ಶನಿವಾರ ಸಾವನ್ನಪ್ಪಿದೆ.

ತೋಟದ ಕೆರೆಯಲ್ಲಿ ಸಿಲುಕಿದ್ದ 35 ವರ್ಷದ ಹೆಣ್ಣಾನೆಯನ್ನು ದುಬಾರೆ ಸಾಕಾನೆಗಳ ಸಹಾಯದಿಂದ ರಕ್ಷಿಸಲಾಗಿತ್ತು. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀಬ್ ಚಿಕಿತ್ಸೆ ನೀಡುತ್ತಿದ್ದರು. ಕಾಲು, ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದ ಕಾರಣ ಆನೆಗೆ ಮೇಲೆ ಏಳಲು ಆಗಿರಲಿಲ್ಲ. ಮಲಗಿದ್ದ ಸ್ಥಿತಿಯಲ್ಲೇ ನರಳುತ್ತ ಅದು ಪ್ರಾಣ ಬಿಟ್ಟಿದೆ. ಚಿಕ್ಲಿಹೊಳೆ ಅರಣ್ಯ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ಮಡಿಕೇರಿ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಲ್.ಮಂಜುನಾಥ್, ಸೋಮವಾರಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಡಿಆರ್‌ಎಫ್ಒ ರಂಜನ್, ದೇವಿಪ್ರಸಾದ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry