ಆನ್‌ಲೈನ್ ಬುಕ್ಕಿಂಗ್‌ ಒಪ್ಪಂದ

7

ಆನ್‌ಲೈನ್ ಬುಕ್ಕಿಂಗ್‌ ಒಪ್ಪಂದ

Published:
Updated:

ಬೆಂಗಳೂರು: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಆರಂಭಿಸಿರುವ ಪ್ಯಾಕೇಜ್‌ ಟೂರ್‌ಗಳ ಮಾಹಿತಿ ಇನ್ನು ಮುಂದೆ ‌ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ(ಕೆಎಸ್‌ಆರ್‌ಟಿಸಿ) ವೆಬ್‌ಸೈಟ್‌ನಲ್ಲೂ(‌www.ksrtc.in) ಲಭ್ಯವಾಗಲಿದೆ.

ಎರಡೂ ಸಂಸ್ಥೆಗಳ ನಡುವೆ ಇತ್ತೀಚೆಗೆ ಒಪ್ಪಂದ ಏರ್ಪಟ್ಟಿದೆ. ಕೆಎಸ್‌ಟಿಡಿಸಿ ವೆಬ್‌ಸೈಟ್‌ (www.kstdc.co) ಜೊತೆಗೆ ಕೆಎಸ್‌ಆರ್‌ಟಿಸಿಯ ಅವತಾರ್ ಪೋರ್ಟಲ್‌ ಮತ್ತು  ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಅಲ್ಲದೇ, ಕೆಎಸ್‌ಆರ್‌ಟಿಸಿಯ ಬುಕ್ಕಿಂಗ್ ಕೌಂಟರ್‌ಗಳಲ್ಲೂ ಮುಂಗಡ ಟಿಕೆಟ್ ಖರೀದಿಸಬಹುದಾಗಿದೆ ಎಂದು ಕೆಎಸ್‌ಟಿಡಿಸಿ ಪ್ರಕಟಣೆ ತಿಳಿಸಿದೆ.

ಇತ್ತೀಚೆಗೆ ಆರಂಭಿಸಿರುವ ಪುನೀತ ಯಾತ್ರೆ ಪ್ಯಾಕೇಜ್‌ ಪ್ರವಾಸಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಈ ಪ್ಯಾಕೇಜ್‌ಗಳನ್ನು ಜನಪ್ರಿಯಗೊಳಿಸಲು ಕೆಎಸ್‌ಆರ್‌ಟಿಸಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದೂ ಪ್ರಕಟಣೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry