ಚಂದ್ರಶೇಖರ ಪ್ರಧಾನಿಯಾಗಲು ರಾಜಸೂಯ ಯಾಗ

7

ಚಂದ್ರಶೇಖರ ಪ್ರಧಾನಿಯಾಗಲು ರಾಜಸೂಯ ಯಾಗ

Published:
Updated:
ಚಂದ್ರಶೇಖರ ಪ್ರಧಾನಿಯಾಗಲು ರಾಜಸೂಯ ಯಾಗ

ಹೈದರಾಬಾದ್‌: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರು ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಲಿ ಎಂದು ಹಾರೈಸಿ ಇಲ್ಲಿನ ಬ್ರಾಹ್ಮಣ ಸೇವಾ ಸಂಘ ಶನಿವಾರ ರಾಜಸೂಯ ಯಾಗ ನಡೆಸಿದೆ.

‘ನಾವು ಯಾಗ ಮಾಡುತ್ತಿರುವ ವಿಚಾರ ಮುಖ್ಯಮಂತ್ರಿಗೆ ತಿಳಿದಿಲ್ಲ. ಇಂದಿನ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲು ಅವರು ಸೂಕ್ತ ವ್ಯಕ್ತಿ’ ಎಂದು ಸಂಘದ ಅಧ್ಯಕ್ಷ ಸುಧಾಕರ ಶರ್ಮಾ ಹೇಳಿದ್ದಾರೆ.

ಬಷೀರ್‌ಭಾಗ್‌ನ ಕನಕದುರ್ಗ ದೇವಾಲಯದಲ್ಲಿ ಶರ್ಮಾ ದಂಪತಿ ಹಾಗೂ ಇತರರು ಸೇರಿ ಯಾಗ ನಡೆಸಿದ್ದಾರೆ. ಸಂಘದ ವತಿಯಿಂದ ಎಲ್ಲಾ ಜಿಲ್ಲೆಗಳಲ್ಲೂ ಯಾಗ ಮಾಡುವಂತೆ ಅವರು ಕರೆ ನೀಡಿದ್ದಾರೆ. ‘ರಾವ್‌ ಅವರು ಮುಖ್ಯಮಂತ್ರಿಯಾದ ಬಳಿಕ ಎಲ್ಲಾ ದೇವಾಲಯಗಳ ಅರ್ಚಕರಿಗೆ ಸಂಬಳ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry