ಮುಂಬೈ: ಜಿಎಸ್ಟಿ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹವು ಏಪ್ರಿಲ್ನಿಂದ ಏರಿಕೆ ಕಾಣಲಿದ್ದು, ಪ್ರತಿ ತಿಂಗಳೂ ₹ 90,000 ಕೋಟಿಗೂ ಅಧಿಕ ಮೊತ್ತ ಸಂಗ್ರಹವಾಗಲಿದೆ ಎಂದು ಕೇಂದ್ರೀಯ ಎಕ್ಸೈಸ್ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಇಸಿ) ಹೇಳಿದೆ.
ಡಿಸೆಂಬರ್ನಲ್ಲಿ ಜಿಎಸ್ಟಿ ಸಂಗ್ರಹ ₹ 86,703 ಕೋಟಿ ಇತ್ತು. ಅದು ಜನವರಿಯಲ್ಲಿ ₹ 86,318 ಕೋಟಿಗೆ ಇಳಿಕೆ ಕಂಡಿತ್ತು.
‘ಮುಂದಿನ ಹಣಕಾಸು ವರ್ಷದಿಂದ ಜಿಎಸ್ಟಿ ಸಂಗ್ರಹದಲ್ಲಿ ಏರಿಕೆ ಕಂಡುಬರಲಿದೆ. ವ್ಯವಸ್ಥೆ ಸುಧಾಸುತ್ತಿದೆ. ತೆರಿಗೆ ತಪ್ಪಿಸುವವರ ವಿರುದ್ಧ ಕಠಿಣ ಕ್ರಮ ಜಾರಿಗೊಳಿಸಿ ಅವರನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು. ಈ ಕಾರಣಗಳಿಂದ ಜಿಎಸ್ಟಿಯಿಂದ ಬರುವ ವರಮಾನ ಹೆಚ್ಚಾಗಲಿದೆ’ ಎಂದು ಸಿಬಿಇಸಿ ಅಧ್ಯಕ್ಷೆ ವನಜಾ ಸರ್ನಾ ಅವರು ತಿಳಿಸಿದ್ದಾರೆ.