ಸಿರಿಯಾ: 11 ಸಾವಿರ ಮಂದಿ ಸುರಕ್ಷಿತ ಸ್ಥಳಕ್ಕೆ

7

ಸಿರಿಯಾ: 11 ಸಾವಿರ ಮಂದಿ ಸುರಕ್ಷಿತ ಸ್ಥಳಕ್ಕೆ

Published:
Updated:

ಮಾಸ್ಕೊ: ಉಗ್ರರ ನೆಲೆಗಳ ಮೇಲೆ ಸರ್ಕಾರಿ ಪಡೆಗಳು ದಾಳಿ ಆರಂಭಿಸಿದ್ದು, ಸಿರಿಯಾ ರಾಜಧಾನಿ ಡಮಾಸ್ಕಸ್‌ನ ಹೊರವಲಯದಲ್ಲಿರುವ ಪೂರ್ವ ಗೊವುಟಾದಿಂದ ಕೆಲವೇ ಗಂಟೆಗಳಲ್ಲಿ ಸುಮಾರು 11 ಸಾವಿರ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ ಎಂದು ರಷ್ಯಾದ ಸೇನೆ ತಿಳಿಸಿದೆ.

ರಷ್ಯಾ ಸೇನೆಯ ಮೇಲ್ವಿಚಾರಣೆಯಲ್ಲಿರುವ ಕಾರಿಡಾರ್‌ ಮೂಲಕ ಶನಿವಾರ  ಪ್ರತಿಗಂಟೆಗೆ ಮೂರು ಸಾವಿರ ನಾಗರಿಕರು ತೆರಳುತ್ತಿದ್ದಾರೆ ಎಂದು ಸೇನೆಯ ಮೇಜರ್‌ ಜನಲರ್‌ ವ್ಲಾದಿಮಿರ್‌ ಝೊಲುಕಿನ್‌ ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ನಡೆಯುತ್ತಿರುವ ಯುದ್ಧದಲ್ಲಿ 1,300 ಮಂದಿ ಮೃತಪಟ್ಟಿದ್ದಾರೆ. ಐದು ಸಾವಿರ ಮಂದಿ ಗಾಯಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry