ಫುಟ್‌ಬಾಲ್‌: ಸೌತ್ ಯುನೈಟೆಡ್‌ಗೆ ಜಯ

7

ಫುಟ್‌ಬಾಲ್‌: ಸೌತ್ ಯುನೈಟೆಡ್‌ಗೆ ಜಯ

Published:
Updated:

ಬೆಂಗಳೂರು: ಸೌತ್‌ ಯುನೈಟೆಡ್‌ ಎಫ್‌ಸಿ ತಂಡದವರು ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿ ಎಫ್‌ಎ) ವತಿಯ ಸೂಪರ್‌ ಡಿವಿ ಷನ್‌ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದ್ದಾರೆ.

ಅಶೋಕನಗರದಲ್ಲಿರುವ ಬೆಂಗ ಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸೌತ್‌ ಯುನೈಟೆಡ್‌ 3–0 ಗೋಲುಗಳಿಂದ ಜವಾಹರ್ ಯೂನಿಯನ್‌ ಎಫ್‌ಸಿ ತಂಡವನ್ನು ಸೋಲಿಸಿತು.

ಇದರೊಂದಿಗೆ ತಂಡ ಒಟ್ಟು 16 ಪಾಯಿಂಟ್ಸ್‌ ಕಲೆಹಾಕಿ ಈ ಬಾರಿಯ ಲೀಗ್‌ನಲ್ಲಿ ಆರನೇ ಸ್ಥಾನ ಗಳಿಸಿತು.

ಏಳನೇ ನಿಮಿಷದಲ್ಲಿ ನಿಖಿಲ್‌ ಗೋಲು ಬಾರಿಸಿ ಸೌತ್‌ ಯುನೈಟೆಡ್‌ ತಂಡದ ಖಾತೆ ತೆರೆದರು. 32ನೇ ನಿಮಿಷದಲ್ಲಿ ರಾಮು ಚೆಂಡನ್ನು ಗುರಿ ಮುಟ್ಟಿಸಿ 2–0ರ ಮುನ್ನಡೆಗೆ ಕಾರಣರಾದರು. 40ನೇ ನಿಮಿಷದಲ್ಲಿ ಮಗೇಶ್‌ ಗೋಲು ಬಾರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ದಿನದ ಇನ್ನೊಂದು ಪಂದ್ಯ ದಲ್ಲಿ ಎಫ್‌ಸಿ ಡೆಕ್ಕನ್‌ 3–1 ಗೋಲುಗಳಿಂದ ಸಿಐಎಲ್‌ ಎಫ್‌ಸಿ ವಿರುದ್ಧ ಗೆದ್ದಿತು. ಅಶ್ವಿನ್‌ 9ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಕ್ಲಿಂಟನ್‌ 12 ಮತ್ತು 22ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.

ಸಿಐಎಲ್‌ ತಂಡದ ಕವಿ ಅರಸನ್‌ 40ನೇ ನಿಮಿಷದಲ್ಲಿ ಗೋಲು ಗಳಿಸಿದರು.  ಈ ಬಾರಿಯ ಲೀಗ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಎರಡು ಸ್ಥಾನ ಗಳಿಸಿದ ಆರ್‌ಡಬ್ಲ್ಯುಎಫ್‌ ಎಫ್‌ಸಿ (4 ಪಾಯಿಂಟ್ಸ್‌) ಮತ್ತು ಎಫ್‌ಸಿ ಡೆಕ್ಕನ್‌ (3 ಪಾಯಿಂಟ್ಸ್‌) ತಂಡಗಳು ‘ಎ’ ಡಿವಿಷನ್‌ಗೆ ಹಿಂಬಡ್ತಿ ಹೊಂದಿದವು.

‘ಎ’ ಡಿವಿಷನ್‌ ಲೀಗ್‌ನಲ್ಲಿ ಮೊದಲ ಎರಡು ಸ್ಥಾನ ಗಳಿಸಿದ್ದ ಬೆಂಗಳೂರು ಈಗಲ್ಸ್‌ ಎಫ್‌ಸಿ ಮತ್ತು ಎಡಿಇ ಎಫ್‌ಸಿ ತಂಡಗಳು ಸೂಪರ್‌ ಡಿವಿಷನ್‌ಗೆ ಬಡ್ತಿ ಪಡೆದವು.

‘ಎ’ ಡಿವಿಷನ್‌ನಲ್ಲಿ ಕೊನೆಯ ಎರಡು ಸ್ಥಾನ ಪಡೆದ ರಾಯಲ್ಸ್‌ ಎಫ್‌ಸಿ ಮತ್ತು ಸಾಯ್‌ ತಂಡಗಳು ‘ಬಿ’ ಡಿವಿಷನ್‌ಗೆ ಹಿಂಬಡ್ತಿ ಹೊಂದಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry