ಬಸ್‌ನಲ್ಲಿ ಪ್ಯಾಂಟ್ ಜಿಪ್ ಬಿಚ್ಚಿದ ಆರೋಪಿಗೆ ಶೋಧ!

7

ಬಸ್‌ನಲ್ಲಿ ಪ್ಯಾಂಟ್ ಜಿಪ್ ಬಿಚ್ಚಿದ ಆರೋಪಿಗೆ ಶೋಧ!

Published:
Updated:

ಬೆಂಗಳೂರು: ಬಿಎಂಟಿಸಿ ಬಸ್‌ನಲ್ಲಿ ಪ್ಯಾಂಟ್ ಜಿಪ್‌ ಬಿಚ್ಚಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ 65 ವರ್ಷದ ಹಿರಿಯ ನಾಗರಿಕರೊಬ್ಬರ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಸಂಬಂಧ ಬಿಟಿಎಂ ಲೇಔಟ್‌ನ 26 ವರ್ಷದ ಯುವತಿ ದೂರು ಕೊಟ್ಟಿದ್ದಾರೆ.

‘ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ನಾನು, ಮಾರ್ಚ್ 13ರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಬಸ್‌ನಲ್ಲಿ ಮನೆಗೆ ಹೊರಟಿದ್ದೆ. ನನ್ನ ಸೀಟಿನ ಪಕ್ಕದಲ್ಲೇ ಸುಮಾರು ಹಿರಿಯರೊಬ್ಬರು ನಿಂತಿದ್ದರು.’‘ನಾನು ಅವರಿಗೆ ಸೀಟು ಬಿಟ್ಟುಕೊಡಲು ಮುಂದಾದಾಗ, ‘ಬೇಡ ಕುಳಿತುಕೊಳ್ಳಮ್ಮ’ ಎಂದರು. ಬಸ್‌ ಕೋರಮಂಗಲ ನೂರು ಅಡಿ ರಸ್ತೆಯಲ್ಲಿ ಸಾಗುತ್ತಿದ್ದಾಗ, ಅವರು ನನ್ನ ಬೆನ್ನು ಸವರಲು ಶುರು ಮಾಡಿದರು. ಅಲ್ಲದೆ, ಪ್ಯಾಂಟ್‌ನ ಜಿಪ್ ಸಹ ಬಿಚ್ಚಿಕೊಂಡು ಅಸಭ್ಯವಾಗಿ ವರ್ತಿಸಿದರು.’

‘ಇದರಿಂದ ಮುಜುಗರವಾಗಿ ಅವರಿಗೆ ಬೈದೆ. ಈ ಹಂತದಲ್ಲಿ ಸಹ ಪ್ರಯಾಣಿಕರು, ‘ನಿಮ್ಮ ತಂದೆಯಷ್ಟು ವಯಸ್ಸಾಗಿದೆ. ಹೋಗಲಿ ಬಿಟ್ಟು ಬಿಡಮ್ಮ’ ಎಂದರು. ಅಲ್ಲೇ ಬಸ್ ನಿಲ್ಲಿಸಿದ ಚಾಲಕ, ಆ ವ್ಯಕ್ತಿಗೆ ಬುದ್ಧಿ ಹೇಳಿ ಕಳುಹಿಸಿದರು. ಘಟನೆಯಿಂದ ನನಗೆ ತುಂಬ ಬೇಸರವಾಗಿದ್ದು, ಆರೋಪಿಯನ್ನು ಪತ್ತೆ ಮಾಡಿ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ.

ಅಶ್ಲೀಲ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ ತಂದ (ಐಪಿಸಿ 509) ಹಾಗೂ ಲೈಂಗಿಕ ದೌರ್ಜನ್ಯ (354ಎ) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಬಸ್ ಚಾಲಕ ಹಾಗೂ ಕಂಡಕ್ಟರ್‌ನ ಹೇಳಿಕೆ ಪಡೆಯಲಾಗಿದ್ದು, ಆರೋಪಿಯ ಶೋಧ ಕಾರ್ಯ ನಡೆಯುತ್ತಿದೆ ಎಂದು ಕೋರಮಂಗಲ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry