ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹವೆಂಬ ರಿಯಲ್ ಎಸ್ಟೇಟ್, ಮಿದುಳು ಎಂಬ ಚಿನ್ನ!

Last Updated 17 ಮಾರ್ಚ್ 2018, 19:38 IST
ಅಕ್ಷರ ಗಾತ್ರ

ನಾನು ಎಷ್ಟೋ ಜನ ಸಾಧಕರನ್ನ ಇಂಟರ್‌ವ್ಯೂ ಮಾಡಿದ್ದೇನೆ. ನಿಮ್ಮ ತಲೆಗೂ, ನನ್ನ ತಲೆಗೂ, ಅವರ ತಲೆಗೂ, ಐನ್‌ಸ್ಟೀನ್‌ ತಲೆಗೂ ಏನೂ ವ್ಯತ್ಯಾಸ ಇಲ್ಲ. ನಮ್ಮ ಎಲ್ಲರ ತಲೆ ಒಳಗೂ ಇರುವುದು ಅದೇ ಬ್ರೇನ್‌, ಅದೇ ಕೆಪಾಸಿಟಿ. ಅದನ್ನ ಹೇಗೆ ಯೂಸ್‌ ಮಾಡ್ತೀರಿ ಅನ್ನೋದ್ರಿಂದ ನಿಮ್ಮ ಜೀವನ ನಿರ್ಣಯ ಆಗುತ್ತೆ.

ಅದಕ್ಕೆ ಮುಖ್ಯವಾಗಿ ಇರುವ ವಿಷಯ ಪ್ರಾಕ್ಟೀಸ್‌...ಪ್ರಾಕ್ಟೀಸ್‌...ಪ್ರಾಕ್ಟೀಸ್‌...ಐ ಕೀಪ್‌ ಟೆಲ್ಲಿಂಗ್‌ ಸ್ಟೂಡೆಂಟ್ಸ್‌; ಮೊದಲೆಲ್ಲ ನಮ್ಮ ಚಿಕ್ಕ ವಯಸ್ಸಲ್ಲಿ ಶೂ ಲೇಸ್‌ ಕಟ್ಟಿಕೊಳ್ಳಬೇಕು ಅಂದರೆ ಬಹಳ ಕಷ್ಟ ಆಗೋದು. ಈಗ ಬಹಳ ಈಜಿಯಾಗಿ ಕಟ್ಟಿಕೊಂಡುಬಿಡ್ತೀವಿ...ಯಾಕೆ ಹೇಳಿ? ಯಾಕಂದ್ರೆ, ಅದನ್ನು ದಿನಾಗ್ಲೂ ಮಾಡ್ತೀವಿ ಅಷ್ಟೇ ಅದು. ದಿನಾಗ್ಲೂ ಮಾಡುವಂತಹ ವಿಷಯ, ದಿನಾಗ್ಲೂ ಪ್ರಾಕ್ಟೀಸ್‌ ಮಾಡುವ ವಿಷಯ ಬಹಳ ಸುಲಭವಾಗುತ್ತೆ. Its about applying your mind every day...every day on that subject.

ಈಗ, ಎಷ್ಟೊಂದು ಹುಡುಗರನ್ನು ನಾನು ಭೇಟಿ ಮಾಡ್ತೀನಿ. ಅವ್ರು ಏನಂತಾರೆ, ಸರ್‌ ಅವ್ರಿಗೆ ಇರೋಂಥ ಶ್ರೀಮಂತಿಕೆ ನಮಗಿಲ್ಲ ಸಾರ್‌. ಅವ್ನು ಬಿಡಿ ಸಾರ್‌, ಅವನ ಹತ್ರ ಕೋಟ್ಯಂತರ ರೂಪಾಯಿ ಬ್ಯಾಂಕ್‌ ಬ್ಯಾನೆಲ್ಸ್‌ ಇದೆ ಸರ್‌. ಇನ್ನೂ ಕೆಲವ್ರು..ಸಾರ್‌, ಅವ್ನ ಫ್ಯಾಮಿಲಿ ರಿಚ್‌ ಫ್ಯಾಮಿಲಿ ಸಾರ್‌...ಚಿನ್ನದಲ್ಲೇ ಉರುಳಾಡ್ತಾರೆ ಸರ್‌. ಇದೆಲ್ಲ ಭ್ರಮೆ. ಈ ಶತಮಾನದಲ್ಲಿ ಫಾರ್ಚೂನ್‌ 500 ಕಂಪನೀಸ್‌ ಅಂತ ಇರುತ್ತೆ. ಆ ಲೀಸ್ಟ್‌ ನೋಡಿ. ಯಾರ್ಯಾರು ತುಂಬ ಸಾಧನೆ ಮಾಡಿದ್ದಾರೆ, ಯಾರ್ಯಾರು ತುಂಬಾ ಹಣ ಗಳಿಸಿದ್ದಾರೆ ಅವರೆಲ್ಲ ಫಸ್ಟ್ ಜನರೇಷನ್‌. ಅವರ ತಾತ, ಮುತ್ತಾತ ಯಾರೂ ಶ್ರೀಮಂತರಲ್ಲ.

ಎಲ್ಲಾ ಆರ್ಡಿನರಿ ಮಿಡಲ್‌ ಕ್ಲಾಸ್‌ ಪೀಪಲ್‌ ಮಕ್ಕಳೇ ಅಪಾರವಾದ ಸಾಧನೆಯನ್ನು ಮಾಡಿದ್ದಾರೆ. ಬಿಕಾಸ್‌, ಮ್ಯಾಟರ್‌ ಆಗೋದು ಒಂದು ಐಡಿಯಾ ಅಷ್ಟೇ. ಒಂದು ಸಣ್ಣ ಐಡಿಯಾ ಇಡೀ ಜಗತ್ತು ನಿಮ್ಮ ಮನೆ ಮುಂದೆ ಕ್ಯೂ ನಿಲ್ಲೋ ಹಾಗೆ ಮಾಡಿ ಬಿಡುತ್ತೆ. ಹಾಗಾಗಿ ಬೇಕಾಗಿರೋದು ಒಂದು ಒಳ್ಳೇ ಐಡಿಯಾ. ನಿಮ್ಮ ಎರಡು ಕಿವಿ ಮಧ್ಯೆ ಇದ್ಯಲ್ಲ ಅದಕ್ಕೆ ಇರೋಂಥ ರಿಯಲ್‌ ಎಸ್ಟೇಟ್‌ ವ್ಯಾಲ್ಯೂ ಯಾವುದಕ್ಕೂ ಇಲ್ಲ.

ನಿಮ್ಮ ಬ್ರೇನ್‌ ಪವರ್‌ IS THE BIGGEST REAL ESTATE. ಅಂಡ್‌ ಚಿನ್ನ ಅಂತ ಹೇಳ್ತೀರಲ್ಲ...ನಿಮ್ಮ ಮಾತುಗಳು ಮುತ್ತಿನಂತಿರಬೇಕು, ಚಿನ್ನದಂತಿರಬೇಕು ಅಂತ ಹಿರಿಯರು ಹೇಳ್ತಿದ್ದರು. ಅದಕ್ಕಿಂತ ಚಿನ್ನವಾದ್ದು ಏನೂ ಇಲ್ಲ. ನಿಮ್ಮ ಪದಭಂಡಾರ, ವಕಾಬ್ಯುಲರಿ, ನೀವು ವರ್ಡ್ಸ್‌ನ ಹೇಗೆ ಯೂಸ್‌ ಮಾಡ್ತೀರ ಅನ್ನೋದು ಅಸೆಟ್‌ ಆಗುತ್ತೆ. ಆ ಬ್ಯಾಲೆನ್ಸ್ ..ಬ್ಯಾಂಕ್‌ ಬ್ಯಾಲೆನ್ಸ್ ಮುಖ್ಯ ಅಲ್ಲ. ಎಮೋಷನಲ್‌ ಬ್ಯಾಲೆನ್ಸ್‌.

ನಿಮ್ಮ ಕೋಪವನ್ನು ನಿಮ್ಮ ಹಿಡಿತದಲ್ಲಿ ಹಿಡಿಯೋಕೆ ಸಾಧ್ಯ ಆದ್ರೆ, ನಿಮ್ಮ ಎಮೋಷನ್‌ ಬಗ್ಗೆ ನಿಮಗೆ ಬ್ಯಾಲೆನ್ಸ್ ಇದ್ರೆ, ಎಲ್ಲಾ ಬ್ಯಾಂಕ್‌ ಬ್ಯಾಲೆನ್ಸ್‌ಗಿಂತ ಅದು ದೊಡ್ಡದಾಗುತ್ತೆ. ಅಂಡ್‌ ವಾಹನಗಳು...ನನ್ನ ಹತ್ರ ಆ ಕಾರ್‌ ಇದೆ, ಈ ಕಾರ್‌ ಇದೆ,...ಯಾವ್‌ ವಾಹನ ರೀ. ಸಪೋಸ್‌ ನೀವೊಂದು ವಾಹನ ತಗೊಂತೀರಿ, ಹೊಸಾ ವಾಹನ ನಿಮಗೆ ಕೊಡ್ತೀನಿ...ಅಲ್ಲೋಗಿ ಡಿಕ್ಕಿ ಹೊಡಿತೀರ, ಆಮೇಲೆ ಅಲ್ಹೋಗಿ ಡಿಕ್ಕಿ ಹೊಡಿತಿರ...ಅಲ್ಲೋಗ್‌ ಡಿಕ್ಕಿ ಹೊಡಿತಿರ...ಒಪ್ತೀರಾ ನೀವು? ಇಲ್ಲ ತಾನೇ.

ನಿಮ್ಮ ದೇಹಕ್ಕಿಂತ ಒಂದು ಅದ್ಭುತವಾದ ವಾಹನ ಬೇರೆ ಏನೂ ಇರೋಕೆ ಸಾಧ್ಯ ಇಲ್ಲ. ನಿಮ್ಮ ಹುಟ್ಟಿನಿಂದ ನಿಮ್ಮ ಸಾಯುವವರೆಗೂ ನಿಮ್ಮನ್ನ ಕರ್ಕೊಂಡು ಹೋಗೋ ಒಂದೇ ವಾಹನ ನಿಮ್ಮ ದೇಹ. ಆ ದೇಹವನ್ನ ನೋಡ್ಕೊಳ್ಳೋದು, ಆರೋಗ್ಯವನ್ನ ನೋಡ್ಕೊಳ್ಳೋದು ನಿಮ್ಮ ಫಸ್ಟ್ ಡ್ಯೂಟಿ ಆಗುತ್ತೆ. ಯಾವುದೇ ಕೆಟ್ಟ ಚಟಕ್ಕೆ ಸಿಕ್ಕಿ ಹಾಕೊಳ್ಳದಹಾಗೆ ನಿಮ್ಮ ಆರೋಗ್ಯದ ಕಡೆ ಗಮನ ಕೊಡೋದು ಬಹಳ ಬಹಳ ಮುಖ್ಯ ಆಗುತ್ತೆ. ಅಷ್ಟನ್ನ Concentrate ಮಾಡಿ, ಜಗತ್ತಿನ ಬೇರೆಲ್ಲ ಶ್ರೀಮಂತಿಕೆ ಬಂದೇ ಬರುತ್ತೆ. ಡೆಫೆನೆಟ್ಲಿ.

ಮೊನ್ನೆ ಆ್ಯಪಲ್‌ ಸ್ಟೀವ್‌ ಜಾಬ್ಸ್‌ ಬಗ್ಗೆ ಒಂದು ಕಥೆ ಹೇಳ್ತಿದ್ರು; ಎಲ್ಲ ಸೇರಿ ಐಫೋನ್‌ ಮಾಡುದ್ರಂತೆ. ಅದಕ್ಕೆ ಜಾಬ್ಸ್ ಅವರು ‘ಇದಕ್ಕಿಂತ ಥಿನ್‌ ಆಗಿ, ಸಾಧ್ಯನೇ ಇರಬಾರ್ದು ಅಷ್ಟು ಸಣ್ಣದಾದ ಫೋನ್‌ ಮಾಡ್ಕೊಡು ಬನ್ನಿ’ ಅಂತ ಹೇಳುತ್ತಾರೆ. ಸೈಂಟಿಸ್ಟ್‌, ಟೆಕ್ನೀಷಿಯನ್ಸ್ ಎಲ್ಲ ಕೂತ್ಕೊಂಡು, ಒಂದು ಫೋನ್‌ ಡಿಸೈನ್‌ ಮಾಡಿ, ಒಂದು ಅತಿ ಸಣ್ಣದಾದ ಫೋನ್‌ ಮಾಡಿ ತಗೊಂಡ್‌ ಬಂದು ಜಾಬ್ಸ್‌ಗೆ ಕೊಟ್ರಂತೆ. ಅವರು ನೋಡುದ್ರು...ಬಹಳ ಸಣ್ಣ ಇದೆ, ಚೆನ್ನಾಗಿದೆ. ‘ಬಟ್‌ ಇದಕ್ಕಿಂತ ಸಣ್ಣ ಮಾಡಕ್‌ ಆಗಲ್ವಾ?’ ಎಂದು ಕೇಳಿದರು.

‘ಇಲ್ಲಾ ಸಾರ್‌, ಒಳಗೆ ಜಾಗನೇ ಇಲ್ಲ ಸಾರ್‌. ಇದಕ್ಕಿಂತ ಸಣ್ಣ ಮಾಡಕ್‌ ಆಗದೇ ಇಲ್ಲ ಸಾರ್‌’ ಅಂದ್ರಂತೆ. ‘ಹೌದಾ’ ಅಂತ ಅವರು ನಡ್ಕೊಂಡು ಹೋಗ್ಬುಟ್ಟು, ಅಲ್ಲೊಂದು ಫಿಷ್‌ ಟ್ಯಾಂಕ್‌ ಇಟ್ಟು. ಆ ಫಿಷ್‌ ಟ್ಯಾಂಕ್‌ ಒಳಗೆ ಫೋನ್‌ ಹಾಕಿದ್ರಂತೆ. ಆಗ ಗಾಳಿ ಬಬಲ್ಸ್‌ ಬಂತಂತೆ... ಅವ್ರು ಹೇಳಿದ್ರು, ಒಳಗೆ ಗಾಳಿ ಇದೆ. ಅಂದರೆ ಒಳಗೆ ಜಾಗ ಇದೇ ಅಂತ ಅರ್ಥ. ದಯವಿಟ್ಟು ಸಣ್ಣ ಮಾಡ್ಬೋದು, ಮಾಡಿ ಅಂದ್ರಂತೆ.

ಹಾಗೇ ಪ್ರತಿಯೊಂದು ವಿಷ್ಯದಲ್ಲೂ ನೀವು ಮಾಡ್ತಿರೊ ಕೆಲ್ಸವನ್ನ ಇನ್ನಷ್ಟು ಶ್ರೇಷ್ಠವಾಗಿ ಮಾಡೋಕೆ ಒಂದು ಅವಕಾಶ ಇದ್ದೇ ಇರುತ್ತೆ. ನಿಮಗಿಂತ ಒಳ್ಳೆ ವ್ಯಕ್ತಿ ನಿಮ್ಮೊಳಗೆ ಇರ್ತಾನೆ. ಆ ವ್ಯಕ್ತಿಯನ್ನ ಹೊರ ತೆಗೆಯೋದು, ನೀವು ಮಾಡ್ತಿರೊ ಕೆಲಸವನ್ನು ಇನ್ನೂ ಶ್ರೇಷ್ಠವಾಗಿ ಮಾಡೋದು ಜೀವನದ ಗುರಿಯಾಗಬೇಕು. You must make excellence as your every day habit. ಅದೊಂದು ಸಣ್ಣ ವಿಷಯ ಇರಬಹುದು, ಮನೆಯಲ್ಲಿ ಅಡುಗೆ ಮಾಡೋದು ಇರಬಹುದು, ಬಟ್ಟೆ ಐರನ್‌ ಮಾಡಿ ಫೋಲ್ಡ್‌ ಮಾಡೋದು ಇರಬಹುದು. ಏನಾಗಿದ್ರೂ ಸರಿ...ಇದಕ್ಕಿಂತ ಶ್ರೇಷ್ಠವಾಗಿ ಇದನ್ನ ಮಾಡೋಕ್‌ ಆಗೊಲ್ಲ ಅನ್ನೋ ರೀತಿಯಲ್ಲಿ ಪ್ರತಿಯೊಂದು ಕೆಲಸವನ್ನು ಮಾಡಿ, ನೀವು ಅಪಾರ ಸಾಧನೆಯನ್ನ ಗಳಿಸಿಯೇ ಗಳಿಸ್ತೀರಿ. ಹಾಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಅಭಿನಂದನೆಗಳು. ಈ ಯುಗಾದಿಗೆ ಆಲ್‌ ಆಫ್ ಯು ಪ್ಲೀಸ್‌ ಡು ಸಂಥಿಂಗ್‌ ಗ್ರೇಟ್‌.

ಇಂತಿ ನಿಮ್ಮ, ರಮೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT