ಮಿಲೇನಿಯಲ್ಸ್‌ಗೆ ಅರಬ್ಬೀ ಸಮುದ್ರದಡಿಯಲ್ಲಿ ಗುರುತಿನ ಚೀಟಿ ವಿತರಣೆ

7

ಮಿಲೇನಿಯಲ್ಸ್‌ಗೆ ಅರಬ್ಬೀ ಸಮುದ್ರದಡಿಯಲ್ಲಿ ಗುರುತಿನ ಚೀಟಿ ವಿತರಣೆ

Published:
Updated:
ಮಿಲೇನಿಯಲ್ಸ್‌ಗೆ ಅರಬ್ಬೀ ಸಮುದ್ರದಡಿಯಲ್ಲಿ ಗುರುತಿನ ಚೀಟಿ ವಿತರಣೆ

ಕಾರವಾರ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಹೊಸ ಮತದಾರರಿಗೆ ಮತದಾರರ ಗುರುತಿನ ಚೀಟಿ ನೀಡಲು ಉತ್ತರ ಕನ್ನಡ ಜಿಲ್ಲಾಡಳಿತ ವಿನೂತನ ಕಾರ್ಯಕ್ರಮವೊಂದನ್ನು ಮಾಡಿದೆ. 2000 ಇಸವಿ ಜನವರಿ 1ರಂದು ಜನಿಸಿದವರಿಗೆ ಮತದಾರರ ಗುರುತಿನ ಚೀಟಿ ನೀಡಲು ಇಲ್ಲಿನ ಜಿಲ್ಲಾಡಳಿತ ಅರಬ್ಬೀ ಸಮುದ್ರದಡಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಗಮನ ಸೆಳೆದಿದೆ.

2000 ಇಸವಿ ಜನವರಿ 1ರಂದು ಹುಟ್ಟಿದವರನ್ನು ಮಿಲೇನಿಯಲ್ಸ್ ಎಂದು ಕರೆಯುತ್ತಾರೆ. ಈ ಇಸವಿಯಲ್ಲಿ ಹುಟ್ಟಿದವರಿಗೆ ಇದು ಮೊದಲ ಮತದಾನ. ಉತ್ತರ ಕನ್ನಡ ಜಿಲ್ಲೆಯಲ್ಲಿ 13 ಮಂದಿ ಮೊದಲ ಬಾರಿ ಮತ ಚಲಾವಣೆ ಮಾಡಲಿದ್ದಾರೆ. ಹಾಗಾಗಿ ಈ ಮಿಲೇನಿಯಲ್ಸ್ ಗೆ ಮತದಾರರ ಗುರುತಿನ ಚೀಟಿಯನ್ನು ನೀಡಲು ಸಮುದ್ರದಡಿದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡೆಪ್ಯುಟಿ ಕಮಿಷನರ್ ಎಸ್.ಎಸ್ ನಕುಲ್, ಜಿಲ್ಲಾ ಪಂಚಾಯತ್ ಸಿಇಒ ಚಂದ್ರಶೇಖರ ನಾಯಕ್, ಸ್ಕೂಬಾ ಡೈವಿಂಗ್ ತಜ್ಞರಾದ ರಂಜಿತ್ ಪೂಂಜಾ ಅವರು ದೇವಭಾಗ್ ನಲ್ಲಿ 15 ಅಡಿ ಸಮುದ್ರದಾಳಕ್ಕೆ ಧುಮುಕಿ ಮತದಾರರ ಗುರುತಿನ ಚೀಟಿ ವಿತರಿಸಿದ್ದಾರೆ.

ಭಟ್ಕಳ ತಾಲೂಕಿನ ಮುರ್ಡೇಶ್ವರದ ದೀಕ್ಷಾ ಮತ್ತು ಪೃಥ್ವಿ ಎಂಬವರಿಗೆ ನಕುಲ್ ಸಮುದ್ರದಾಳದಲ್ಲಿ  ಗುರುತಿನ ಚೀಟಿ ವಿತರಿಸಿದ್ದಾರೆ. ಈ ಕಾರ್ಯಕ್ರಮ 15 ನಿಮಿಷಗಳ ಕಾಲ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry