‘ಕಲೆ, ಸಂಸ್ಕೃತಿ, ಪರಂಪರೆಗಳ ರಕ್ಷಣೆ ಅಗತ್ಯ’

7
ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಆಳ್ವಾಸ್‌ ಸಾಂಸ್ಕೃತಿಕ ವೈಭವದ ಸಂಭ್ರಮ

‘ಕಲೆ, ಸಂಸ್ಕೃತಿ, ಪರಂಪರೆಗಳ ರಕ್ಷಣೆ ಅಗತ್ಯ’

Published:
Updated:
‘ಕಲೆ, ಸಂಸ್ಕೃತಿ, ಪರಂಪರೆಗಳ ರಕ್ಷಣೆ ಅಗತ್ಯ’

ಸವದತ್ತಿ: ಆಧುನಿಕತೆಯ ಒತ್ತಡಕ್ಕೆ ದೇಸಿಯ ಕಲೆ, ಸಂಸ್ಕೃತಿ, ಪರಂಪರೆಗಳು ನಶಿಸುತ್ತಿವೆ. ಈ ಹಂತದಲ್ಲಿ ಅಂಥ ಕಲೆಗಳಿಗೆ ಮರುಜೀವ ತುಂಬಿ ಕಾಪಾಡುತ್ತಿರುವ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ತಾಲ್ಲೂಕು ಕ್ರೀಡಾಂಗಣದಲ್ಲಿ ಸಿ.ಎಂ.ಮಾಮನಿ ಚಾರಿಟಬಲ್‌ ಟ್ರಸ್ಟ್ ಹಾಗೂ ಆಳ್ವಾಸ್‌ ನುಡಿಸಿರಿ ವಿರಾಸತ್‌ ಘಟಕ ಆಯೋಜಿಸಿದ್ದ ಆಳ್ವಾಸ್‌ ಸಾಂಸ್ಕೃತಿಕ ವೈಭವವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಹೊಸ ಶಿಕ್ಷಣ, ದೇಶದ ಸಂಸ್ಕೃತಿ, ಪರಂಪರೆಗಳನ್ನು ದೇಶ ವಿದೇಶದಲ್ಲಿ ಪರಿಚಯಿಸುವ ಮೂಲಕ ಭಾರತವನ್ನು ಅಂತರರಾಷ್ಟ್ರ ಮಟ್ಟದಲ್ಲಿ ಬೆಳಗುತ್ತಿರುವುದು ಒಳ್ಳೆಯ ಬೆಳವಣಿಗೆ, ಇದು ಸರ್ಕಾರಕ್ಕೆ ಸಮನಾದ ಕೆಲಸವಾಗಿದೆ ಎಂದರು.ಇಂಥ ಸಂಸ್ಥೆಯಲ್ಲಿ ತಮ್ಮ ಮಕ್ಕಳು ಓದಲು ಬಯಸಿದರೆ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವಾಸ್‌ ಅವರನ್ನು ಸಂಪರ್ಕಿಸಿ ಸಹಾಯ ಮಾಡುವುದಾಗಿ ತಿಳಿಸಿದ ಅವರು, ಇಂದು ಪ್ರದರ್ಶನಗೊಳ್ಳುವ ಒಂದೊಂದು ಕಲೆಯೂ ನಮ್ಮಲ್ಲಿ ಹೆಮ್ಮೆ ಮೂಡಿಸಲಿವೆ ಎಂದರು.

ಶಿವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ದಂಡಪಾಣಿ ದೀಕ್ಷಿತ್, ಮನೋಹರ ದೀಕ್ಷಿತ್, ಅಜ್ಜಯ್ಯ ಸ್ವಾಮೀಜಿ, ಶಿವಾನಂದ ಪಟ್ಟಣಶೆಟ್ಟಿ, ವಿನಯಕುಮಾರ ದೇಸಾಯಿ, ಮೌಲಾಸಾಬ ತಬ್ಬಲಜಿ, ರಾಜಶೇಖರ ಕಾರದಗಿ, ಸುಭಾಸ ರಜಪೂತ, ಜಗದೀಶ ಶಿಂತ್ರಿ, ಸಿ.ಬಿ. ದೊಡ್ಡಗೌಡರ, ಬಸವರಾಜ ಕಾರದಗಿ, ಎಂ.ಟಿ. ಶಿಗ್ಲಿ, ಶಂಕರಗೌಡ ಪಾಟೀಲ, ಜಗದೀಶ ಹನಸಿ ಉಪಸ್ಥಿತರಿದ್ದರು. ಆಳ್ವಾಸ್‌ ಸಾಂಸ್ಕೃತಿಕ ವೈಭವದಲ್ಲಿ ದೇಶ ವಿದೇಶಗಳ ಸಾಂಪ್ರದಾಯಕ ಕಲೆಗಳು, ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry