ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, ಜಗನ್ನಾಥ್‌ ಮಿಶ್ರಾ ಖುಲಾಸೆ

7

ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, ಜಗನ್ನಾಥ್‌ ಮಿಶ್ರಾ ಖುಲಾಸೆ

Published:
Updated:
ಮೇವು ಹಗರಣದ ನಾಲ್ಕನೇ ಪ್ರಕರಣ: ಲಾಲು ಪ್ರಸಾದ್‌ ದೋಷಿ, ಜಗನ್ನಾಥ್‌ ಮಿಶ್ರಾ ಖುಲಾಸೆ

ರಾಂಚಿ: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ನಾಲ್ಕನೇ ಪ್ರಕರಣದಲ್ಲೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ತಪ್ಪಿತಸ್ಥ ಎಂದು ಸೋಮವಾರ ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ.

ಸಿಬಿಐ ನ್ಯಾಯಾಲಯ ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲೂ ತಪ್ಪಿತಸ್ಥ ಎಂದು ತೀರ್ಪು ಪ್ರಕಟಿಸಿ ಶಿಕ್ಷೆ ನೀಡಿತ್ತು. ಇದೀಗ ನಾಲ್ಕನೇ  ನಾಲ್ಕನೇ ಪ್ರಕರಣದಲ್ಲೂ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು, ಶಿಕ್ಷೆ ಪ್ರಮಾಣ ಪ್ರಕಟಿಸಿಲ್ಲ.

ಬಿಹಾರದ ಮಾಜಿ ಮುಖ್ಯಮಂತ್ರಿ ಜಗನ್ನಾಥ್‌ ಮಿಶ್ರಾ ಅವರನ್ನು ನಾಲ್ಕನೇ  ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ದುಮ್ಕಾ ಖಜಾನೆಯಲ್ಲಿ ₹3.13 ಕೋಟಿ ಮೊತ್ತದ ವಂಚನೆ ಪ್ರಕರಣದ ಸಂಬಂಧ ಇಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry