ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ

7

ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ

Published:
Updated:
ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ

ರೋಣ: ಪ್ರತಿಯೊಂದು ಮತಕ್ಷೇತ್ರಕ್ಕೂ ಸಿದ್ದರಾಮಯ್ಯನವರು ಅನುದಾನವನ್ನು ಬಿಡುಗಡೆಗೊಳಿಸಿ ಆಯಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ರೋಣ ತಾಲ್ಲೂಕಿನ ಕಲ್ಲಿಗನೂರು ಗ್ರಾಮದಲ್ಲಿ ಶುಕ್ರವಾರ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಶಿಗೇರಿ ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನ, ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಚಾಲನೆ ನೀಡಿದರು. ಅಲ್ಲದೇ ಬೊಮ್ಮಸಾಗರ ಗ್ರಾಮದಲ್ಲಿ ₹40 ಲಕ್ಷ ವೆಚ್ಚದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ನೆಲ್ಲೂರು ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನ, ಸರ್ಜಾಪುರ ಗ್ರಾ ಮದಲ್ಲಿ ₹1.35 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ, ಬಳಗೋಡ ಗ್ರಾಮದಲ್ಲಿ ಸಿ.ಸಿ. ರಸ್ತೆ ಹಾಗೂ ಎಸ್‌.ಸಿ. ಕಾಲೊನಿಯಲ್ಲಿ ₹10 ಲಕ್ಷ ಅನುದಾನದಲ್ಲಿ ಸಮುದಾಯ ಭವನ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಮುಂದಿನ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುವುರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ ಹುಲ್ಲನ್ನವರ, ಶರಣಗೌಡ ಪಾಟೀಲ, ವೀರಣ್ಣ ಶೆಟ್ಟರ, ವಿ.ಆರ್. ಗುಡಿಸಾಗರ, ರಾಜು ಮಾಲಗತ್ತಿ, ಶಿವಪ್ಪ ಮಾದರ, ಪರಮೇಶಪ್ಪ ಬೂದಿಹಾಳ, ಮುತ್ತು ಅಕ್ಕರಗೌಡ್ರ, ಕಲ್ಲನಗೌಡ್ರ ಪಾಟೀಲ, ಪಕೀರಗೌಡ ಪೊಲೀಸಪಾಟೀಲ, ಹನಮಂತ ಹೊಸೂರ, ಬಸವರಾಜ ಬೂದಿಹಾಳ, ಮುತ್ತಪ್ಪ ಮಾದರ, ಹುಸೇನಸಾಬ ನಾಗನೂರ, ದೇವಪ್ಪ ಬೂದಿಹಾಳ, ಯಲ್ಲಪ್ಪ ಹೊಸೂರ, ಎಂ.ಪಿ.ಪಾಟೀಲ, ಹನಮಂತ ದೊಡ್ಡಮನಿ, ಸಾಂತಗೌಡ ಗೌಡ್ರ, ಸತ್ಯಪ್ಪ ವಾಲೀಕಾರ, ರವಿ ಬೆಲ್ಲಪ್ಪನವರ, ರಾಯಪ್ಪ ತಳವಾರ, ನವೀನ ರಾಠೋಡ, ವೀರಪ್ಪ ರಾಠೋಡ, ಮಲ್ಲಪ್ಪಜ್ಜ ಶಾಸ್ತ್ರಿ, ಸಂಗಪ್ಪ ನಾಗನೂರ, ದೇವಪ್ಪ ಬೂದಿಹಾಳ, ಹನಮಪ್ಪ ಉಸುಲಕೊಪ್ಪದ, ಹರಿಶ್ಚಂದ್ರ ಲಮಾಣಿ, ಸಂತೋಷ ಕಳಕಾಪುರ, ಚಂದ್ರು ಕಾರಬಾರಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry