ದ್ವೇಷ ಬಿಡಿ ಮುಖ್ಯವಾಹಿನಿಗೆ ಬನ್ನಿ: ಶಾಸಕ

7
ಮಾರಲದಿನ್ನಿ ತಾಂಡಾದಲ್ಲಿ ಸಂತ ಸೇವಾಲಾಲ್ ಮೂರ್ತಿ ಪ್ರತಿಷ್ಠಾಪನೆ: ಶಾಸಕ ಕರೆ

ದ್ವೇಷ ಬಿಡಿ ಮುಖ್ಯವಾಹಿನಿಗೆ ಬನ್ನಿ: ಶಾಸಕ

Published:
Updated:
ದ್ವೇಷ ಬಿಡಿ ಮುಖ್ಯವಾಹಿನಿಗೆ ಬನ್ನಿ: ಶಾಸಕ

ಮಸ್ಕಿ: ಪರಸ್ಪರ ದ್ವೇಷ ಹಾಗೂ ಅಸೂಯೆ ಬಿಟ್ಟು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಪ್ರತಾಪಗೌಡ ಪಾಟೀಲ ಕರೆ ನೀಡಿದರು.

ತಾಲ್ಲೂಕಿನ ಮಾರಲದಿನ್ನಿ ತಾಂಡಾದಲ್ಲಿ ಶುಕ್ರವಾರ ನಡೆದ ಸಂತ ಸೇವಾಲಾಲ್ರ ಜಯಂತಿ ಹಾಗೂ ಸೇವಾಲಾಲ್‌ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬಂಜಾರ ಸಮಾಜದ ಜನತೆ ದುಶ್ಚಟಕ್ಕೆ ಬಲಿಯಾಗಿ ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದುಕೊಂಡಿದ್ದಾರೆ ಸಮಾಜದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವಂತೆ ಹೇಳಿದರು.

ಬಟ್ಟಿ ಸರಾಯಿ ಬಂಜಾರ ಸಮಾಜಕ್ಕೆ ಅಂಟಿಕೊಂಡಿರುವ ಬಹುದೊಡ್ಡ ರೋಗ. ಇದರಿಂದ ತಾಂಡದಲ್ಲಿ ಶಾಂತಿ ನೆಮ್ಮದಿ ಹಾಳಾಗಿ ಹೋಗಿದೆ. ತಾಂಡಾದ ಜನರ ನಡುವೆ ದ್ವೇಷ, ಅಸೂಯೆ ಭಾವನೆಗಳು ಅಂಟಿಕೊಂಡಿವೆ ಹೀಗಾಗಿ ಪ್ರತಿಯೊಂದು ತಾಂಡದಲ್ಲಿ ಸರಾಯಿ ನಿಷೇಧಗೊಳಿಸಬೇಕು ಎಂದರು.

ಬಂಜಾರ ಶಕ್ತಿಪೀಠ ಕುಮಾರ ಮಹಾರಾಜ, ಗೊರ ಶಿಕವಾಡಿ ಸಂಚಾಲಕ ಭೋಜರಾಜ್ ನಾಯಕ, ತಿಮ್ಮಾಪೂರ ಮಠದ ಮಹಾಂತ ಸ್ವಾಮೀಜಿ, ಲಿಂಗಸುಗೂರಿನ ವಿಜಯ ಮಹಾಂತೇಶ ಮಠದ ಸಿದ್ದಲಿಂಗ ಸ್ವಾಮೀಜಿ, ರಾಜಾ ಸೋಮನಾಥ ನಾಯಕ, ಬಸನಗೌಡ ತುರ್ವಿಹಾಳ ಮಾತನಾಡಿದರು.

ಗುರುಬಸವ ಸ್ವಾಮೀಜಿ, ಗಣಪತಿ ಪೂಜಾರಿ, ಚೆಂದಪ್ಪ ಪೂಜಾರಿ, ಬಂಜಾರ ಮುಖಂಡ ಪೋಮಾನಾಯ್ಕ, ಪ್ರಕಾಶ ಡಿ.ಸಿ. ಜಂಬಣ್ಣ ಚವ್ಹಾಣ, ಶೇಖರ ರಾಠೋಡ್, ಶ್ರೀನಿವಾಸ ಅಂಗಡಿ, ಉಮಾಪತಿ ನಾಯ್ಕ, ಮೌನೇಶ ಟಿ. ನಾರಾಯಣ ರಾಠೋಡ್, ರಾಮಣ್ಣ ನಾಯ್ಕ, ಶರಣಪ್ಪ ಪವಾರ, ಡಾಕುನಾಯ್ಕ ವಕೀಲರು, ಸಾಮಾನಾಯ್ಕ, ವೆಂಕಟೇಶ ಎನ್ ರಾಠೋಡ್, ಅಮರೇಶ ಅಡವಿಭಾವಿ ತಾಂಡ, ಹನುಮಂತ ಜಕ್ಕೇರಮಡು, ಆರ್.ಟಿ ನಾಯ್ಕ, ಸಿದ್ದನಗೌಡ ಮಾಟೂರು ಇತರರು ಇದ್ದರು

ಸೇವಾಲಾಲ್ ಮೂರ್ತಿ ಮೆರವಣಿಗೆ: ಸಂತ ಸೇವಾಲಾಲ್ 279 ಜಯಂತಿ ಅಂಗವಾಗಿ ಸೇವಾಲಾಲ್ ಮೂರ್ತಿಯನ್ನು ಅದ್ದೂರಿ ಮೆರವಣಿಗೆ ಮಾಡಲಾಯಿತು.

ತಾಂಡದ ದುರ್ಗಾದೇವಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಬಂಜಾರ ಸಮಾಜದ ಮಹಿಳೆಯರು ಲಂಬಾಣಿ ಉಡುಪಿನಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು, ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry