ಭಾರತೀಯರ ವಾಟ್ಸ್‌ಆ್ಯಪ್‌ ಗುರಿಯಾಗಿಸಿ ಚೀನಾ ಹ್ಯಾಕರ್‌ಗಳಿಂದ ದಾಳಿ ಸಾಧ್ಯತೆ: ಸೇನೆ ಎಚ್ಚರಿಕೆ

7

ಭಾರತೀಯರ ವಾಟ್ಸ್‌ಆ್ಯಪ್‌ ಗುರಿಯಾಗಿಸಿ ಚೀನಾ ಹ್ಯಾಕರ್‌ಗಳಿಂದ ದಾಳಿ ಸಾಧ್ಯತೆ: ಸೇನೆ ಎಚ್ಚರಿಕೆ

Published:
Updated:
ಭಾರತೀಯರ ವಾಟ್ಸ್‌ಆ್ಯಪ್‌ ಗುರಿಯಾಗಿಸಿ ಚೀನಾ ಹ್ಯಾಕರ್‌ಗಳಿಂದ ದಾಳಿ ಸಾಧ್ಯತೆ: ಸೇನೆ ಎಚ್ಚರಿಕೆ

ನವದೆಹಲಿ: ಭಾರತೀಯರ ವಾಟ್ಸ್‌ಆ್ಯಪ್‌ ಗುರಿಯಾಗಿಸಿ ಚೀನಾದ ಹ್ಯಾಕರ್‌ಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಸೇನೆ ಎಚ್ಚರಿಕೆ ನೀಡಿದೆ.

ಈ ಕುರಿತು ಸೇನೆಯ ‘ಸಾರ್ವಜನಿಕ ಸಂಪರ್ಕ ಹೆಚ್ಚುವರಿ ಪ್ರಧಾನ ನಿರ್ದೇಶನಾಲಯದ (ಎಡಿಜಿಪಿಐ)’ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್ ಮಾಡಲಾಗಿದೆ. ವಾಟ್ಸ್‌ಆ್ಯಪ್ ಬಳಕೆದಾರರು ಎಚ್ಚರಿಕೆ ವಹಿಸುವಂತೆ ವಿಡಿಯೊದಲ್ಲಿ ಸೂಚಿಸಲಾಗಿದೆ.

‘ನಿಮ್ಮ ಡಿಜಿಟಲ್‌ ಜಗತ್ತನ್ನು ಭೇದಿಸಲು ಚೀನಾದವರು ಎಲ್ಲ ವಿಧಾನಗಳನ್ನೂ ಬಳಸಲಿದ್ದಾರೆ. ನಿಮ್ಮ ಕಂಪ್ಯೂಟರನ್ನು ಹ್ಯಾಕ್‌ ಮಾಡಲು ಬಳಸುವ ಹೊಸ ವಿಧಾನ ವಾಟ್ಸ್‌ಆ್ಯಪ್ ಆಗಿರಲಿದೆ. +86ನಿಂದ ಆರಂಭಗೊಳ್ಳುವ ಚೀನಾದ ದೂರವಾಣಿ ಸಂಖ್ಯೆಗಳು ನಿಮ್ಮ ಗುಂಪುಗಳಿಗೆ ಲಗ್ಗೆಯಿಡಲಿದ್ದು, ಎಲ್ಲ ದತ್ತಾಂಶಗಳನ್ನು ಕಸಿಯಲಿವೆ’ ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

‘ಅಲ್ಲದೆ, ದೂರವಾಣಿ ಸಂಖ್ಯೆ ಬದಲಾಯಿಸಿದರೆ ಗುಂಪಿನ ಅಡ್ಮಿನ್‌ ಗಮನಕ್ಕೆ ತನ್ನಿ. ಹಳೆಯ ವಾಟ್ಸ್‌ಆ್ಯಪ್ ಸಂಖ್ಯೆಯನ್ನು ಡಿಲೀಟ್ ಮಾಡಿ. ಸುರಕ್ಷತೆ ಮೊದಲು. ಎಚ್ಚರದಿಂದಿರಿ! ಸುರಕ್ಷಿತರಾಗಿರಿ!’ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry