ಸಲ್ಲೂ ಪದ್ಯ ಬರೀತಾರಂತೆ!

7

ಸಲ್ಲೂ ಪದ್ಯ ಬರೀತಾರಂತೆ!

Published:
Updated:
ಸಲ್ಲೂ ಪದ್ಯ ಬರೀತಾರಂತೆ!

ಸಲ್ಮಾನ್‌ ಖಾನ್‌– ಜಾಕ್ವೆಲಿನ್‌ ಫರ್ನಾಂಡಿಸ್‌ – ಬಾಬಿ ದೇವಲ್‌ ಅಭಿನಯದ ‘ರೇಸ್‌–3’ ಚಿತ್ರದ ಮೋಷನ್‌ ಪೋಸ್ಟರ್‌ ಗುರುವಾರವಷ್ಟೇ ಬಿಡುಗಡೆಯಾಗಿದ್ದು ಸಲ್ಲೂ–ಜಾಕಿ ಅಭಿಮಾನಿಗಳ ಕುತೂಹಲ ಉತ್ತುಂಗಕ್ಕೇರುವಂತೆ ಮಾಡಿದೆ. ಇದೀಗ ಬಂದ ಹೊಸ ಸುದ್ದಿ ಏನೆಂದರೆ, ಈ ಚಿತ್ರದ ಮೂಲಕ ಸಲ್ಲೂ ಭಾಯ್‌ ಗೀತರಚನೆಕಾರರಾಗಲಿದ್ದಾರೆ! ಹೌದು, ‘ರೇಸ್‌–3’ಗಾಗಿ ಸಲ್ಲೂ ಹಾಡೊಂದನ್ನು ಬರೆಯಲಿರುವ ಸಂಗತಿ ಹೊರಬಿದ್ದಿದೆ.

ರೆಮೊ ಡಿಸೋಜ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಸಖತ್‌ ರೊಮ್ಯಾಂಟಿಕ್‌ ಆದ ಹಾಡೊಂದು ಬೇಕು ಎಂದು ನಿರ್ದೇಶಕರು ಚರ್ಚಿಸುತ್ತಿರುವಾಗ ತಾವು ಬರೆದಿರುವ ಹಾಡಿನ ಬಗ್ಗೆ ಸಲ್ಲೂ ಪ್ರಸ್ತಾಪಿಸಿದರಂತೆ. ನಿರ್ಮಾಪಕ ರಮೇಶ್‌ ತೌರಾನಿ ಅವರಿಗೂ ಈ ಹಾಡು ಹಿಡಿಸಿದೆಯಂತೆ. ಗೀತ ರಚನೆಕಾರರಾಗಿ ಸಲ್ಲೂ ಮೊದಲ ಯತ್ನದಲ್ಲೇ ಗೆದ್ದರೆ ಅವರ ಮುಡಿಗೆ ಹೊಸ ಗರಿಯೇರಲಿರುವುದಂತೂ ಸತ್ಯ.

ಇದೇ ವರ್ಷದ ಈದ್‌ ಹಬ್ಬಕ್ಕೆ ಈ ಚಿತ್ರ ಬಿಡುಗಡೆಯಾಗಬೇಕು ಎಂಬುದು ಸಲ್ಮಾನ್‌ ಲೆಕ್ಕಾಚಾರ. ಚಿತ್ರ ತಂಡ ಈಗಾಗಲೇ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಸಲ್ಮಾನ್‌ ಬರೆದ ಹಾಡು ಅಂತಿಮಗೊಂಡಲ್ಲಿ ಚಿತ್ರತಂಡ ಅಬುಧಾಬಿ ವಿಮಾನ ಹತ್ತಲಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry