ತಲ್ವಾರ್‌ ದಂಪತಿಗೆ ನೋಟಿಸ್‌

7

ತಲ್ವಾರ್‌ ದಂಪತಿಗೆ ನೋಟಿಸ್‌

Published:
Updated:
ತಲ್ವಾರ್‌ ದಂಪತಿಗೆ ನೋಟಿಸ್‌

ನವದೆಹಲಿ : ಆರುಷಿ–ಹೇಮರಾಜ್‌ ಕೊಲೆ ಪ‍್ರಕರಣದಲ್ಲಿ ರಾಜೇಶ್‌ ಹಾಗೂ ನೂಪುರ್‌ ತಲ್ವಾರ್‌ ಅವರನ್ನು ಮರುವಿಚಾರಣೆ ನಡೆಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಸ್ವೀಕರಿಸಿದೆ.

ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ತಲ್ವಾರ್‌ ದಂಪತಿಗೆ ನೋಟಿಸ್‌ ಜಾರಿ ಮಾಡಿದೆ.

2008ರಲ್ಲಿ ನಡೆದಿದ್ದ ಆರುಷಿ–ಹೇಮರಾಜ್‌ ಕೊಲೆ ಪ್ರಕರಣದಲ್ಲಿ ರಾಜೇಶ್‌ ಮತ್ತು ನೂಪುರ್‌ ತಲ್ವಾರ್‌ ಅವರನ್ನು ಅಲಹಾಬಾದ್‌ ಹೈಕೋರ್ಟ್‌ ಕಳೆದ ಅಕ್ಟೋಬರ್‌ ನಲ್ಲಿ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೇಮರಾಜ್‌ ಪತ್ನಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಕೂಡ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಏನಿದು ಪ್ರಕರಣ: 2008 ಮೇ 15ರ ರಾತ್ರಿ ನೊಯಿಡಾದ ನಿವಾಸದಲ್ಲಿ ಆರುಷಿ ತಲ್ವಾರ್‌ ಹಾಗೂ ಮನೆ ಕೆಲಸದ ಸಹಾಯಕ ಹೇಮರಾಜ್‌ ಅವರ ಕೊಲೆ ನಿಗೂಢವಾಗಿ ನಡೆದಿತ್ತು. ಈ ಕೊಲೆ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ ಆಗಿನ ಮುಖ್ಯಮಂತ್ರಿ ಮಾಯಾವತಿ, ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry