ಲೇಖಕಿ ನಿಶಾ ಜೋಸ್ ವಿರುದ್ಧ ದೂರು

7

ಲೇಖಕಿ ನಿಶಾ ಜೋಸ್ ವಿರುದ್ಧ ದೂರು

Published:
Updated:
ಲೇಖಕಿ ನಿಶಾ ಜೋಸ್ ವಿರುದ್ಧ ದೂರು

ಕೊಟ್ಟಾಯಂ: ಕೇರಳದ ಸಂಸದ ಜೋಸ್ ಕೆ. ಮಾಣಿ ಅವರ ಹೆಂಡತಿ ನಿಶಾ ಜೋಸ್ ವಿರುದ್ಧ ಶಾಸಕ ಪಿ.ಸಿ. ಜಾರ್ಜ್ ಅವರ ಮಗ ಶೋನ್ ಜಾರ್ಜ್ ಅವರು ಶನಿವಾರ ದೂರು ದಾಖಲಿಸಿದ್ದಾರೆ. ಈ ಪುಸ್ತಕ ಈಗ ಚರ್ಚೆಗೆ ಗ್ರಾಸವಾಗಿದೆ.

ನಿಶಾ ಅವರು ತಮ್ಮ ‘ದಿ ಅದರ್ ಸೈಡ್ ಆಫ್ ದಿಸ್ ಲೈಫ್’ ಪುಸ್ತಕದಲ್ಲಿ, ರೈಲು ಪ್ರಯಾಣದ ವೇಳೆ ಹಿರಿಯ ರಾಜಕಾರಣಿಯ ಮಗನೊಬ್ಬ ತನ್ನ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣವನ್ನು ವಿವರಿಸಿದ್ದರು. ಆದರೆ ಆ ವ್ಯಕ್ತಿಯ ಗುರುತನ್ನಾಗಲಿ, ಪ್ರಯಾಣದ ದಿನವನ್ನಾಗಲಿ ಅವರು ವಿವರಿಸಿಲ್ಲ. ಗುರುವಾರ ಈ ಪುಸ್ತಕ ಬಿಡುಗಡೆಯಾಗಿದೆ.

‘ನಿಶಾ ಅವರು ತಮ್ಮ ಪುಸ್ತಕದಲ್ಲಿ ನನ್ನನ್ನೇ ಚಿತ್ರಿಸಲು ಪ್ರಯತ್ನಿಸಿದ್ದಾರೆ. ಅವರ ಆರೋಪದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಗುರಿಯಾಗಿಸಲಾಗುತ್ತಿದೆ. ನನಗೆ ಹಾಗೂ ನನ್ನ ತಂದೆಗೆ ಸಾರ್ವಜನಿಕವಾಗಿ ಕೆಟ್ಟ ಹೆಸರು ತರುವ ರಾಜಕೀಯ ಪಿತೂರಿ ಇದು’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ನಾನು ನಿಶಾ ಅವರ ಜೊತೆ ಪ್ರಯಾಣ ಮಾಡಿಲ್ಲ, ಅನುಚಿತ ವರ್ತನೆ ತೋರಿಲ್ಲ. ಪುಸ್ತಕದಲ್ಲಿ ಹೇಳಲಾದ ಪ್ರಕರಣದ ತನಿಖೆ ನಡೆಸಿ ಸತ್ಯವನ್ನು ಪತ್ತೆ ಮಾಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನಗೆ ಅವಹೇಳನ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದ್ದಾರೆ.

ಪುಸ್ತಕದಲ್ಲೇನಿದೆ?: ‘ನಾನು ರೈಲಿಗಾಗಿ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ವ್ಯಕ್ತಿಯೊಬ್ಬ ಬಂದು ಪರಿಚಯ ಮಾಡಿಕೊಂಡ. ರೈಲಿನಲ್ಲಿ ನನ್ನ‍ ಪಕ್ಕದಲ್ಲೇ ಕೂತು ಮಾತಿಗೆ ಆರಂಭಿಸಿದ. ನನಗೆ ನಿದ್ದೆ ಬರುವ ಸುಳಿವು ನೀಡಿದರೂ ಆತ ಎಚ್ಚೆತ್ತುಕೊಳ್ಳದೆ ಮಾತನಾಡುವುದನ್ನು ಮುಂದುವರಿಸಿದ್ದ

‘ನಾನು ನೇರವಾಗಿ ಟಿಕೆಟ್ ಪರೀಕ್ಷಕರ ಬಳಿ ಹೋಗಿ ನನ್ನ ಅವಸ್ಥೆ ಹೇಳಿಕೊಂಡು, ಆ ವ್ಯಕ್ತಿಗೆ ನನ್ನ ಆಸನವನ್ನು ಬಿಟ್ಟು ತೆರಳುವಂತೆ ತಿಳಿಸಲು ಕೋರಿಕೊಂಡೆ. ಆದರೆ, ಈ ವ್ಯಕ್ತಿ ತಂದೆಯಂತೆಯೇ ಪ್ರಭಾವಿ ಆಗಿದ್ದರೆ ನಾನು ಮಧ್ಯ ಪ್ರವೇಶಿಸುವುದಿಲ್ಲ.

ನೀವಿಬ್ಬರೂ ರಾಜಕೀಯವಾಗಿಯೂ ಸ್ನೇಹಿತರು. ನಂತರ ಇದು ನನ್ನ ತಲೆಮೇಲೆ ಬರುತ್ತದೆ ಎಂದು ಅವರು ಅಸಹಾಯಕತೆ ತೋರಿದರು

‘ನಂತರ ನಾನು ಸಾಧ್ಯವಾದಷ್ಟು ನನ್ನ ಆಸನದ ಅಂಚಿನಲ್ಲಿ ಕೂತೆ. ಆ ವ್ಯಕ್ತಿ ಕೂತ ಭಂಗಿ ಬದಲಾಯಿಸುವಾಗ ನನ್ನ ಹೆಬ್ಬೆರಳಿಗೆ ಕೈ ತಾಕಿಸಿದ. ಆಕಸ್ಮಿಕ ಎಂದುಕೊಂಡೆ. ಆದರೆ ಈ ಆಕಸ್ಮಿಕವು ಮೂರ್ನಾಲ್ಕು ಬಾರಿ ನಡೆದಾಗ ನನಗೆ ಸಹಿಸಿಕೊಳ್ಳುವುದು ಕಷ್ಟವಾಯಿತು’ ಎಂದು ನಿಶಾ ಜೋಸ್ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry