2ಜಿ: ಖುಲಾಸೆ ಪ್ರಶ್ನಿಸಿ ಮೇಲ್ಮನವಿ

7

2ಜಿ: ಖುಲಾಸೆ ಪ್ರಶ್ನಿಸಿ ಮೇಲ್ಮನವಿ

Published:
Updated:
2ಜಿ: ಖುಲಾಸೆ ಪ್ರಶ್ನಿಸಿ ಮೇಲ್ಮನವಿ

ನವದೆಹಲಿ : ಎರಡನೇ ತಲೆಮಾರಿನ (2ಜಿ) ತರಂಗಾಂತರ ಹಂಚಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ

ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನಿಮೊಳಿ ಮತ್ತು ಇತರರ ಖುಲಾಸೆಯ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ಮೇಲ್ಮನವಿ ಸಲ್ಲಿಸಿದೆ.

ರಾಜಾ, ಕನಿಮೊಳಿ ಅವರಲ್ಲದೆ, ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರ ಹೆಂಡತಿ ದಯಾಳು ಅಮ್ಮಾಳ್‌ ಸೇರಿ 17 ಆರೋಪಿಗಳನ್ನು ದೋಷಮುಕ್ತಗೊಳಿಸಿ ವಿಶೇಷ ನ್ಯಾಯಾಲಯವು ಕಳೆದ ಡಿಸೆಂಬರ್‌ 21ರಂದು ತೀರ್ಪು ನೀಡಿತ್ತು. ಸ್ವಾನ್‌ ಟೆಲಿಕಾಂ ಪ್ರೈ. ಲಿ.ನ (ಎಸ್‌ಟಿಪಿಎಲ್‌) ಪ್ರವರ್ತಕರಾದ ಶಾಹಿದ್‌ ಬಲ್ವಾ ಮತ್ತು ವಿನೋದ್‌ ಗೋಯೆಂಕಾ, ಕುಸೆಗಾಂವ್‌ ಫ್ರೂಟ್ಸ್‌ ಆಂಡ್‌ ವೆಜಿಟೆಬಲ್ಸ್‌ ಪ್ರೈ.ಲಿ. ನ ಆಸಿಫ್‌ ಬಲ್ವಾ ಮತ್ತು ರಾಜೀವ್‌ ಅಗರ್‌ವಾಲ್‌, ಸಿನಿಮಾ ನಿರ್ಮಾಪಕ ಕರೀಮ್‌ ಮೊರಾನಿ, ಕಲೈಗನಾರ್‌ ಟಿವಿಯ ನಿರ್ದೇಶಕ ಶರದ್‌ ಕುಮಾರ್‌ ಪ್ರಕರಣದ ಇತರ ಮುಖ್ಯ ಆರೋಪಿಗಳಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry