ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ ಅಧ್ಯಯನಕ್ಕೆ ಉಪಕರಣ

ನಾಸಾದಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಅಳವಡಿಕೆ
Last Updated 19 ಮಾರ್ಚ್ 2018, 19:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಸೂರ್ಯನಿಂದ ಹೊರಹೊಮ್ಮುವ ಕಿರಣಗಳು ಮತ್ತು ಶಕ್ತಿಯ ಪ್ರಮಾಣವನ್ನು ಅಳೆಯಲು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ), ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಉಪಕರಣವೊಂದನ್ನು ಅಳವಡಿಸಿದೆ.

‘ಟೋಟಲ್‌ ಆ್ಯಂಡ್‌ ಸ್ಪೆಕ್ಟ್ರಲ್‌ ಸೋಲಾರ್‌ ಇರ್ರಾಡಿಯನ್ಸ್‌ ಸೆನ್ಸರ್‌(ಟಿಎಸ್‌ಐಎಸ್‌–1)’ ಹೆಸರಿನ ಉಪಕರಣ ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಮಾಹಿತಿಯನ್ನು ಕಲೆಹಾಕುತ್ತಿದೆ ಎಂದು ನಾಸಾ ತಿಳಿಸಿದೆ.

‘ಟಿಎಸ್‌ಐಎಸ್‌–1' ಉಪಕರಣದಿಂದ ಓಝೋನ್‌ ಪದರ, ಭೂಮಿಯ ಮೇಲಿನ ವಿಕಿರಣಗಳು, ಪರಿಸರ, ವಾತಾವರಣದಲ್ಲಿ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು  ಅನುಕೂಲವಾಗಲಿದೆ’ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ವಿಜ್ಞಾನಿ ಡಾಂಗ್‌ ವು ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 15ರಂದು ಫ್ಲಾರಿಡಾದ ಕೇಪ್‌ ಕಾನವೀರಲ್‌ ವಾಯು ಪಡೆ ನಿಲ್ದಾಣದಿಂದ ಸ್ಪೇಸ್‌ ಎಕ್ಸ್‌ ಫಾಲ್ಕಾನ್‌ 9 ರಾಕೆಟ್‌ ಮೂಲಕ ಈ ಉಪಕರಣವನ್ನು ಉಡಾವಣೆ ಮಾಡಲಾಗಿತ್ತು.

ಎರಡು ತಿಂಗಳಿಂದ ಈ ಉಪಕರಣದ ಪರೀಕ್ಷೆಯನ್ನು ಅಮೆರಿಕದ ಕೊಲೊರಾಡೊ ವಿಶ್ವವಿದ್ಯಾಲಯದ ತಜ್ಞರ ತಂಡ ನಡೆಸುತ್ತಿತ್ತು.

ಸೂರ್ಯನ ವೀಕ್ಷಣೆಗೆ ಈ ಉಪಕರಣದ ಬಾಗಿಲುಗಳು ತೆರೆದ ಬಳಿಕ ಜನವರಿ 11ರಂದು ಪ್ರಥಮ ಬಾರಿ ಮಾಹಿತಿ ಸಂಗ್ರಹಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT