ಮನೆಗೊಬ್ಬರು ಯೋಗಪಟು ಯೋಜನೆ

7

ಮನೆಗೊಬ್ಬರು ಯೋಗಪಟು ಯೋಜನೆ

Published:
Updated:
ಮನೆಗೊಬ್ಬರು ಯೋಗಪಟು ಯೋಜನೆ

ನವದೆಹಲಿ: ದೇಶದ 500 ಗ್ರಾಮಗಳನ್ನು ‘ಸಂಪೂರ್ಣ ಯೋಗ ಗ್ರಾಮ’ಗಳಾಗಿ ರೂಪಿಸುವ ಉಪಕ್ರಮವೊಂದನ್ನು ಆಯುಷ್‌ ಸಚಿವಾಲಯ ಹಮ್ಮಿಕೊಂಡಿದೆ. ಪ್ರತಿ ಮನೆಯ ಕನಿಷ್ಠ ಒಬ್ಬ ವ್ಯಕ್ತಿ ನಿಯಮಿತವಾಗಿ ಯೋಗ ಅಭ್ಯಾಸ ಮಾಡಬೇಕು ಎಂಬುದು ಈ ಯೋಜನೆಯ ತಿರುಳು. ಜೂನ್‌ 21ರ ಅಂತರರಾಷ್ಟ್ರೀಯ ಯೋಗ ದಿನಕ್ಕೂ ಮೊದಲು ಈ ಯೋಜನೆಯನ್ನು ಜಾರಿಗೆ ತರುವ ಉದ್ದೇಶ ಇದೆ.

ಇಂತಹ ಕಾರ್ಯಕ್ರಮವನ್ನು ಕೇರಳದ ಕುನ್ನಂಥಾನಂ ಎಂಬ ಗ್ರಾಮ ಪಂಚಾಯತಿ ಜಾರಿಗೆ ತಂದಿದೆ. ಅದರಿಂದ ಸ್ಫೂರ್ತಿ ಪಡೆದುಕೊಂಡು ಆಯುಷ್ ಸಚಿವಾಲಯ ‘ಸಂಪೂರ್ಣ ಯೋಗ ಗ್ರಾಮ’ ಯೋಜನೆಯನ್ನು ರೂಪಿಸಿದೆ. ಕುನ್ನಂಥಾನಂ ಮಾದರಿಯನ್ನೇ ದೇಶದಾದ್ಯಂತ ವಿಸ್ತರಿಸಲಾಗುವುದು ಎಂದು ಆಯುಷ್‌ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಉಪಕ್ರಮದ ಭಾಗವಾಗಿ ಪ್ರತಿ ಯೋಗ ಗ್ರಾಮದಲ್ಲಿಯೂ ಒಂದು ಸಂಶೋಧನೆ ವಿಸ್ತರಣಾ ಘಟಕ ಸ್ಥಾಪನೆಯಾಗಲಿದೆ. ಯೋಗದಿಂದಾಗಿ ಜನರ ಆರೋಗ್ಯದ ಮೇಲೆ ಆಗಿರುವ ಪರಿಣಾಮಗಳನ್ನು ಈ ಘಟಕವು ಗುರುತಿಸಲಿದೆ.

‘ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ತಡೆಯವುದೇ ಮುಖ್ಯ’ ಎಂಬುದು ಆರೋಗ್ಯ ನೀತಿ 2017ರ ಗುರಿ. ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅತ್ಯುತ್ತಮ ಮಾರ್ಗ. ಯೋಗವು ಅನಾರೋಗ್ಯವನ್ನು ತಡೆಯುತ್ತದೆ. ಜೀವಿತಾವಧಿ ಹೆಚ್ಚಳವಾಗುತ್ತದೆ, ಶಿಶು ಹಾಗೂ ತಾಯಿಯ ಮರಣ ಪ್ರಮಾಣ ಕಡಿಮೆ ಆಗುತ್ತದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.

ಯೋಗ ದಿನಾಚರಣೆಗೆ ಪೂರ್ವಭಾವಿಯಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮೈಸೂರಿಗೆ ಅವಕಾಶ

ಈ ಬಾರಿಯ ಅಂತರ ರಾಷ್ಟ್ರೀಯ ಯೋಗ ದಿನದ ಮುಖ್ಯ ಕಾರ್ಯಕ್ರಮದ ಆತಿಥ್ಯ ವಹಿಸುವ ಅವಕಾಶ ಮೈಸೂರಿಗೆ ದೊರೆಯುವ ಸಾಧ್ಯತೆಯೂ ಇದೆ. ಕಾರ್ಯಕ್ರಮಕ್ಕಾಗಿ ಮೈಸೂರು, ಜೈಪುರ, ಹೈದರಾಬಾದ್‌ ಮತ್ತು ಅಹಮದಾಬಾದ್‌ ನಗರಗಳನ್ನು ಗುರುತಿಸಲಾಗಿದೆ. ಈ ನಾಲ್ಕು ನಗರಗಳ ಪಟ್ಟಿಯನ್ನು ಪ್ರಧಾನಿ ಕಾರ್ಯಾಲಯಕ್ಕೆ (ಪಿಎಂಒ) ಕಳುಹಿಸಲಾಗುವುದು. ಇವುಗಳ ಪೈಕಿ ಒಂದು ನಗರವನ್ನು ಪಿಎಂಒ ಆಯ್ಕೆ ಮಾಡಲಿದೆ.

ವಿವಿಧ ದೇಶಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ 100 ಯೋಗ ಶಿಕ್ಷಕರ ನೇಮಕ

16 ದೇಶಗಳ ಪ್ರತಿನಿಧಿಗಳು ಯೋಗ ಉತ್ಸವದಲ್ಲಿ ಭಾಗಿಯಾಗುವ ನಿರೀಕ್ಷೆ

ಜನಜಾಗೃತಿಗಾಗಿ 10 ರಾಜ್ಯಗಳಲ್ಲಿ ಯೋಗ ಉತ್ಸವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry