ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

7

ನದಿಯಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

Published:
Updated:

ಹುಣಸೂರು: ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಪ್ರೇಮಿಗಳು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗಾವಡಗೆರೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಕೆ.ಆರ್‌.ನಗರದ ಕುವೆಂಪು ಬಡಾವಣೆ ನಿವಾಸಿ ಜಮುನಾ (28) ಮತ್ತು ಹುಣಸೂರು ತಾಲ್ಲೂಕಿನ ತೊಂಡಾಳು ಗ್ರಾಮದ ನಿವಾಸಿ ದಿಲೀಪ್‌ (22) ಆತ್ಮಹತ್ಯೆ ಮಾಡಿಕೊಂಡವರು.

ನರ್ಸಿಂಗ್ ಕೋರ್ಸ್‌ ಮುಗಿಸಿದ್ದ ಜಮುನಾ, ಪದವೀಧರನಾದ ದಿಲೀಪ್‌ ಇವರಿಬ್ಬರೂ ದೂರದ ಸಂಬಂಧಿಕರು. ವಿವಾಹವಾಗಲು ಪೋಷಕರ ಮನವೊಲಿಸುವ ಯತ್ನಿಸಿದ್ದರು.

ಆದರೆ, ಪೋಷಕರು ವಯಸ್ಸಿನ ಅಂತರ ನೆಪವೊಡ್ಡಿ ವಿವಾಹಕ್ಕೆ ತೆರೆ ಎಳೆದಿದ್ದರು. ಹುಣಸೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry